ಉದಯವಾಹಿನಿ, ಗುವಾಹಟಿ  : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. 314 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿರುವ ಆಫ್ರಿಕಾ ಭಾರತದ ಗೆಲುವಿಗೆ ದೊಡ್ಡ ಮೊತ್ತವನ್ನು ನೀಡುವ ಸಾಧ್ಯತೆಯಿದೆ. ಎರಡನೇ ದಿನ ವಿಕೆಟ್‌ ನಷ್ಟವಿಲ್ಲದೇ 9 ರನ್‌ ಗಳಿಸಿದ್ದ ಭಾರತ ಇಂದು 83.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್‌ ಆಯ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಫೋಟಕ 93 ರನ್‌ ಸಿಡಿಸಿದ್ದ ವೇಗಿ ಮಾರ್ಕೊ ಜಾನ್ಸನ್‌ 6 ವಿಕೆಟ್‌ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್‌ ಬಲವನ್ನೇ ಪುಡಿಗಟ್ಟಿದ್ದರು.
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 58 ರನ್‌ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್‌ ಸುಂದರ್‌ 48 ರನ್‌ ಹೊಡೆದಿದ್ದು ಬಿಟ್ಟರೆ ಉಳಿದ ಆಟಗಾರಿಂದ ಉತ್ತಮ ಪ್ರತಿರೋಧ ಬರಲಿಲ್ಲ. 5 ಮಂದಿ ಎರಡಂಕಿಯನ್ನು ಸ್ಕೋರ್‌ ದಾಟಲಿಲ್ಲ.
ಕೆಎಲ್‌ ರಾಹುಲ್‌ 22 ರನ್‌, ಸಾಯಿ ಸುದರ್ಶನ್‌ 15 ರನ್‌, ಧ್ರುವ್‌ ಜರೆಲ್‌ 0, ನಾಯಕ ರಿಷಭ್‌ ಪಂತ್‌ 7, ರವೀಂದ್ರ ಜಡೇಜಾ 6, ನಿತೀಶ್‌ ಕುಮಾರ್‌ ರೆಡ್ಡಿ 10 , ಕುಲದೀಪ್‌ ಯಾದವ್‌ 19 ರನ್‌ ಹೊಡೆದು ಔಟಾದರು. ಮಾರ್ಕೊ ಜಾನ್ಸನ್ 6 ವಿಕೆಟ್‌ ಪಡೆದರೆ ಸೈಮನ್ ಹಾರ್ಮರ್ 3 ವಿಕೆಟ್‌, ಕೇಶವ್‌ ಮಹಾರಾಜ್‌ ಒಂದು ವಿಕೆಟ್‌ ಕಿತ್ತರು.201 ರನ್‌ಗಳಿಗೆ ಆಲೌಟ್‌ ಆಗಿದ್ದ ಕಾರಣ ಭಾರತದ ಮೇಲೆ ಆಫ್ರಿಕಾ ಫಾಲೋವನ್‌ ಹೇರಬಹುದಿತ್ತು. ಆದರೆ ನಾಯಕ ಟೆಂಬಾ ಬವುಮಾ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಮಾಡುವ ನಿರ್ಧಾರ ಕೈಗೊಂಡರು. ಪರಿಣಾಮ ಮೂರನೇ ದಿನದ ಅಂತ್ಯಕ್ಕೆ ಆಫ್ರಿಕಾ 8 ಓವರ್‌ ಆಡಿ ವಿಕೆಟ್‌ ನಷ್ಟವಿಲ್ಲದೇ 26 ರನ್‌ ಹೊಡೆದಿದೆ.

ಇನ್ನೂ ಎರಡು ದಿನದ ಆಟ ಬಾಕಿ ಇದ್ದು, ನಾಳಿನ ದಿನ ಮಹತ್ವ ಪಡೆದಿದೆ. ಒಂದು ವೇಳೆ ಟಿ20ಯಂತ ಆಡಿ ಆಫ್ರಿಕಾ ದೊಡ್ಡ ಮೊತ್ತ ನೀಡಿದರೆ ಭಾರತಕ್ಕೆ ಕಷ್ಟವಾಗಬಹುದು. ಹೀಗಾಗಿ ವಿಕೆಟ್‌ ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಲು ಭಾರತ ಪ್ರಯತ್ನ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!