ಉದಯವಾಹಿನಿ, ಕೊಲಂಬೊ: ಇತಿಹಾಸ ನಿರ್ಮಿಸುವ ಮೂಲಕ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಶ್ರೀಲಂಕಾದ ಕೊಲಂಬೊದ ಪಿ ಸಾರಾ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನೇಪಾಳ ತಂಡವು ನಿಗದಿತ 20 ಓವರ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಭಾರತಕ್ಕೆ 115ರನ್‌ಗಳ ಗೆಲುವಿನ ಗುರಿ ನೀಡಿತು. ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡ ಮೊದಲ 10 ಓವರ್‌ಗಳಲ್ಲಿಯೇ ಶತಕದ ಗಡಿದಾಟ್ಟಿದ್ದರು.
12 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ 117ರನ್‌ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತ ಮಹಿಳಾ ತಂಡವು ಚೊಚ್ಚಲ ಬಾರಿಗೆ ಅಂಧರ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ಇತ್ತೀಚಿಗಷ್ಟೇ ಭಾರತ ಕ್ರಿಕೆಟ್ ಮಹಿಳಾ ತಂಡವು ಚೊಚ್ಚಲ ವಿಶ್ವಕಪ್ ಗೆದ್ದು, ಇತಿಹಾಸ ನಿರ್ಮಿಸಿದೆ.
