ಉದಯವಾಹಿನಿ, ಬಾಗಲಕೋಟೆ: ಟಿಪ್ಪು ಜಯಂತಿಗೆ ಹಾಕಿದ್ದ ಹಸಿರು ರಿಬ್ಬನ್ ಹರಿದು ಹಾಕಿದ್ದಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ರಬಕವಿ ಬನಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಪ್ರತಿ ವರ್ಷ ಎರಡು ಗುಂಪುಗಳು ಟಿಪ್ಪು ಜಯಂತಿ ಆಚರಣೆ ನಡೆಸುತ್ತಿದ್ದವು. ಈ ವೇಳೆ ನಗರದಲ್ಲಿ ಹಸಿರು ರಿಬ್ಬನ್ ಕಟ್ಟಲಾಗಿತ್ತು. ಎದುರಾಳಿ ಗುಂಪಿನ ವ್ಯಕ್ತಿ ರಿಬ್ಬನ್ ಹರಿದ್ದಾರೆ ಎಂದು ಮನೆಗೆ ನುಗ್ಗಿ ಗಲಾಟೆ ಮಾಡಿ ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ ನಡೆದಿದೆ. ನಂತರ ಆಸ್ಪತ್ರೆಗೆ ನುಗ್ಗಿ ಗಾಯಾಳುಗಳ ಮೇಲೆ ಹಲ್ಲೆ ಗುಂಪು ಹಲ್ಲೆ ಮಾಡಿದೆ.
ಮೊದಲಿಗೆ ಅಂಜುಮನ್ ಸಂಸ್ಥೆಯ ಲೆಕ್ಕ ಕೇಳಿದ ವಿಚಾರಕ್ಕೆ ಮನಸ್ತಾಪ ಆರಂಭವಾಗಿತ್ತು. ಈಗ ಎರಡು ಗುಂಪುಗಳು ಹೊಡೆದಾಡುವ ಹಂತಕ್ಕೆ ಹೋಗಿದೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎರಡು ಗುಂಪುಗಳು ಹೊಡೆದಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
