ಉದಯವಾಹಿನಿ, ಕನ್ನಡ ಚಿತ್ರರಂಗದಲ್ಲಿ ವೈಭವೋಪೇತ ಬಹುಕೋಟಿ ವೆಚ್ಚದ, ಬಹುನಿರೀಕ್ಷಿತ ಹಲವು ಚಿತ್ರಗಳು ಬಿಡುಗಡೆಗೆ ಸಜ್ಜಾಗ್ತಿವೆ. ಆ ಸಾಲಿಗೆ ಈಗ ಬಲರಾಮನ ದಿನಗಳು ಚಿತ್ರ ಸೇರ್ಪಡೆಯಾಗಿದೆ. ಹೌದು, 2026ರ ಬಹು ನಿರೀಕ್ಷಿತ ಕನ್ನಡ ಚಿತ್ರವಾಗಿ ಬರ್ತಿದೆ ಬಲರಾಮನ ದಿನಗಳು ಚಿತ್ರ. ಇದಕ್ಕಾಗಿ ಚಿತ್ರತಂಡ ಭರದಿಂದ ಕೆಲಸಗಳನ್ನ ಮಾಡ್ತಿದೆ.
ಬಲರಾಮ ಚಿತ್ರ ಸೆಟ್ಟೇರಿದ ದಿನದಿಂದಲೂ ಹಲವು ವಿಶೇಷ ವಿಚಾರಗಳಿಗೆ ಸುದ್ದಿಯಾಗುತ್ತಲೇ ಬಂದಿದೆ. ಅದ್ರಲ್ಲೂ ದಕ್ಷಿಣ ಭಾರತ ಚಿತ್ರರಂಗದ ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಅವ್ರನ್ನ ಕರೆತಂದು ಕಾರ್ಯಕ್ರಮ ಮಾಡಿ ಸದ್ದು ಮಾಡಿತ್ತು. ರಜಿನಿಕಾಂತ್ ಸೇರಿ ತಮಿಳಿಖ್ಯಾತನಾಮರಿಗೆ ದೊಡ್ಡ ಹಿಟ್‌ಗಳನ್ನ ಕೊಟ್ಟಿರೋ ಸಂತೋಷ್ ನಾರಾಯಣನ್, 50 ಚಿತ್ರಗಳ ನಂತರ 51ನೇ ಚಿತ್ರಕ್ಕೆ ಕನ್ನಡಕ್ಕೆ ಬಂದಿರೋದು ಸಂತಸ ತಂದಿದೆ ಎಂದು ಹೇಳುತ್ತಾ, ತಮ್ಮ ಮೊದಲ ಕನ್ನಡ ಚಿತ್ರ ಬಲರಾಮನ ದಿನಗಳು ಸಿನಿಮಾಗೆ ವಿಶೇಷ ಸಂಗೀತ ಸಂಯೋಜಿಸೋ ಭರವಸೆ ನೀಡಿದ್ರು. ಅದರಂತೆ ಇದೀಗ ಆ ಕೆಲಸವನ್ನ ಮುಗಿಸಿದ್ದು, ಡಿಸೆಂಬರ್‌ನಲ್ಲಿ ಮೊದಲ ಹಾಡಿನ ಬಿಡುಗಡೆಗೆ ಸಜ್ಜಾಗ್ತಿದೆ ಚಿತ್ರತಂಡ.
ಕೆ.ಎಂ.ಚೈನತ್ಯ ನಿರ್ದೇಶನ ಪದ್ಮಾವತಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 80ರ ದಶಕದ ಕಥೆಯಾಗಿರೋ ಈ ಚಿತ್ರಕ್ಕೆ ವೇಣುರವರ ಛಾಯಾಗ್ರಹಣವಿದೆ. ವಿನೋದ್ ಪ್ರಭಾಕರ್ ನಾಯಕನಾಗಿ ಬಲರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!