ಉದಯವಾಹಿನಿ, ಬಿಗ್‌ಬಾಸ್‌ನಲ್ಲಿ ಮಾಜಿ, ಹಾಲಿ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದು ಹಾಲಿ ಸ್ಪರ್ಧಿಗಳಿಗೆ ಮಾಜಿ ಸ್ಪರ್ಧಿಗಳು ಸಾಧ್ಯವಾದಷ್ಟು ಕ್ವಾಟ್ಲೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ರೆಸಾರ್ಟ್‌ಗೆ ಬಂದ ಎರಡನೇ ದಿನ ದೊಡ್ಡ ಅವಾಂತರವೇ ನಡೆದಿದೆ. ಕಾವ್ಯ ಮಾಡಿರುವ ಯಾವುದೋ ಒಂದು ತಪ್ಪಿಗೆ ಚೈತ್ರಾ ಕುಂದಾಪುರ ಎಲ್ಲರಿಗೂ ಶಿಕ್ಷೆ ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಬ್ರೇಕ್ ಹಾಕಿದ್ದು ಸ್ಪರ್ಧಿ ಅಶ್ವಿನಿ ಗೌಡ.
ಸ್ಪರ್ಧಿ ಕಾವ್ಯ ಮಾಜಿ ಸ್ಪರ್ಧಿ ಚೈತ್ರಾ ಎದುರು ಬಂದು ನನ್ ತಲೇಲಿ ಬುದ್ಧಿ ಇಲ್ಲ ಎಂದು ಹೇಳ್ತಾರೆ. ಎಲ್ಲರೂ ಹೇಳುವಂತೆ ಚೈತ್ರಾ ಕಂಡೀಷನ್ ಹಾಕ್ತಾರೆ. ಕಾವ್ಯ, ಗಿಲ್ಲಿ, ಸ್ಪಂದನ, ಅಭಿ ಎಲ್ಲವೂ ನನ್ನ ತಲೆಯಲ್ಲಿ ಬುದ್ಧಿ ಇಲ್ಲ ಅನ್ನೋದನ್ನ ಚೈತ್ರಾ ಮುಂದೆ ಹೋಗಿ ಇವರೆಲ್ಲ ಒಪ್ಪಿಕೊಳ್ತಾರೆ. ಆದರೆ ಅಶ್ವಿನಿ ಆ ಮಾತನ್ನ ಹೇಳಲು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಬುದ್ಧಿ ಇಲ್ಲ ಅನ್ನೋದನ್ನ ಒಪ್ಪಿಕೊಳ್ಳಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳ್ತಾರೆ.
ಮ್ಯಾನೇಜರ್ ಅಭಿ ಎಷ್ಟೇ ಪ್ರಯತ್ನ ಮಾಡಿದ್ರೂ ಅಶ್ವಿನಿ ಒಪ್ಪಿಕೊಳ್ಳಲ್ಲ. ಅವರು ಅತಿಥಿಗಳಾದ ಮಾತ್ರ ನಾವು ಅವರ ಮುಂದೆ ಬುದ್ಧಿ ಇಲ್ಲ ಎಂದು ಒಪ್ಪಿಕೊಳ್ಳಬೇಕೆಂದು ಎಲ್ಲಿಯೂ ಇಲ್ಲ ಎಂದು ಖಡಕ್ಕಾಗಿ ತಮ್ಮ ನಿಲುವಿಗೆ ಬದ್ಧರಾದರು. ರಿಲೀಸ್ ಆಗಿರುವ ಈ ಪ್ರೋಮೋಗೆ ಮೊದಲ ಬಾರಿ ಅಶ್ವಿನಿ ಮಾತಿಗೆ ಉತ್ತಮ ಪ್ರಶಂಸೆ ಸಿಗುತ್ತಿದೆ. ಅಶ್ವಿನಿ ಮಾತಿಗೆ ಬೆಸ್ಟ್ ಕಾಮೆಂಟ್‌ಗಳ ಸುರಿಮಳೆ ಬರುತ್ತಿದೆ.
