ಉದಯವಾಹಿನಿ, ದಾವಣಗೆರೆ: ಬಾಲಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ನಗರದ ಮಾರ್ಕೇಟ್‌ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ. ದಾವಣಗೆರೆಯ ಚಿಕ್ಕನಹಳ್ಳಿಯ ತರುಣ್ (16) ಅತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಏನೂ ಕೆಲಸವನ್ನೂ ಮಾಡದೇ ಮನೆಯಲ್ಲೇ ಇರುತ್ತಿದ್ದ ಬಾಲಕನಿಗೆ ಕೆಲಸಕ್ಕೆ ಹೋಗುವಂತೆ ಪೋಷಕರು ಗದರಿದ್ದರು. ಸುಮ್ಮನೆ ಹುಡುಗರ ಜೊತೆ ಸೇರಿ ಕೆಟ್ಟ ದಾರಿ ಹಿಡಿಯುವ ಬದಲು ಕೆಲಸಕ್ಕೆ ಹೋಗು ಎಂದು ತಿಳುವಳಿಕೆ ಹೇಳಿದ್ದರು.
ಇದರಿಂದ‌ ಮನನೊಂದು ತರುಣ್ ಮನೆ ಬಿಟ್ಟು ಹೋಗಿದ್ದ. ಆತನಿಗಾಗಿ ಕುಟುಂಬಸ್ಥರು ರಾತ್ರಿ ಹುಡುಕಾಟ ನಡೆಸಿದ್ದರು.
ಬೆಳಗ್ಗೆ ರೈಲುಹಳಿ ಮೇಲೆ ರುಂಡ ಮುಂಡ ಬೇರೆಯಾಗಿ ತರುಣ್ ಮೃತದೇಹ ಪತ್ತೆಯಾಗಿತ್ತು. ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!