ಉದಯವಾಹಿನಿ,ಚಿಂಚೋಳಿ: ಮುಂಗಾರು ಮಳೆ ಬಾರದ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಕೂಲಿಕಾರ್ಮಿಕರು ಕೆಲಸವಿಲ್ಲದೆ ಅಲೆಯುವಂತಾಗಿದೆ ಅದಕಾರಣ ಕಾಳಗಿ ತಾಲ್ಲೂಕಾವನ್ನು ಬರಗಾಲವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಗುರುನಂದೇಶ ಕೋಣಿನ್ ಆಗ್ರಹಿಸಿದರು. ವಿಧಾನಸಭಾ ಮತಕ್ಷೇತ್ರದ ಕಾಳಗಿ ತಾಲ್ಲೂಕಿನ ತಾಲ್ಲೂಕಾ ಪಂಚಾಯತ್ ಕಛೇರಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ತಾಪಂ.ಇಓ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಕಾಳಗಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸಮರ್ಪಕವಾಗಿ ಜಾರಿ ಮಾಡಬೇಕು, ಕೂಲಿದರ ಹೆಚ್ಚಿಸಬೇಕು, 200 ಮಾನವ ದಿನಗಳ ಸೃಜನೆ ಮಾಡಬೇಕು, ಬಾಕಿವೇತನ ಪಾವತಿ ಮಾಡಬೇಕು, ಕಾಳಗಿಯಲ್ಲಿ ಎಂಜಿಎನ್ಆರ್ ಇಜಿಎ ಜಾರಿ ಮಾಡಬೇಕು ಹಾಗೂ ಹಲಚೇರಾ ಗ್ರಾಮ ಪಂಚಾಯತನಲ್ಲಿ 15ನೇ ಹಣಕಾಸು ಅನುದಾನ ತನಿಖೆ ಮಾಡಬೇಕು. ಕಾಳಗಿಯಲ್ಲಿ 800ಕುಟುಂಬಗಳು ಕೃಲಸವಿಲ್ಲದೆ ಕುಳಿತ್ತಿದ್ದು, ಕೂಡಲೆಶಕೆಲಸ ನೀಡಬೇಕು, ಕೊಡದೂರ, ಕೋಡ್ಲಿ, ಮಂಗಲಗಿ, ಗ್ರಾಮದ ಕೂಲಿಕಾರರಿಗೆ ಬಾಕಿವೇತನ ಪಾವತಿ, ಆಕ್ರಮವಾಗಿ ಭೂಮಿ ಸಾಗುವಳಿ ಮಾಡುತ್ತಿದ್ದವರನ್ನು ಸಕ್ರಮಗೊಳಿಸಬೇಕು, ಬಕರಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಾಶಿನಾಥ ಬಂಡಿ,ಮಲ್ಲಮ್ಮಾ ಮೋಘಾ, ಸಲಿಂ ಪಟೇಲ ನೈಕೋಡಿ, ರೇವಯ್ಯಸ್ವಾಮಿ, ರಿಯಾಜಪಟೇಲ ಮಂಗಲಗಿ, ಅನೇಕ ಕೂಲಿಕಾರರು ಇದ್ದರು.
