ಉದಯವಾಹಿನಿ, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹಾವಳಿ ಮಿತಿಮೀರಿದ್ದು, ಅತಿಥಿಗಳು ಟ್ರಿಗರ್ ಆಗಿದ್ದಾರೆ. ಗಿಲ್ಲಿ ಡೋಂಟ್ ಕೇರ್ ಆಟಕ್ಕೆ ಅಮಾಯಕ ಸ್ಪರ್ಧಿಗಳು ಗೆಸ್ಟ್‌ಗಳಿಂದ ಬೈಸಿಕೊಳ್ಳುವಂತಾಗಿದೆ. ಮಂಜು ‘ಉಗ್ರ’ ರೂಪ ತಾಳಿದ್ದು, ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಕೆಲ ಸ್ಪರ್ಧಿಗಳನ್ನು ಕೂರಿಸಿಕೊಂಡು ಉಗ್ರಂ ಮಂಜು ವಾರ್ನಿಂಗ್ ಒಂದನ್ನು ಕೊಡ್ತಾರೆ. ‘ಗಿಲ್ಲಿಯಿಂದ ಊಟ ಬಡಿಸಿಕೊಂಡು ನೀವು ತಿನ್ನಬೇಕು.. ನೀವು ತಿಂದಾದ ಮೇಲೆ ಗಿಲ್ಲಿ ಊಟ ಮಾಡ್ಬೇಕು’ ಅಂತ ತಿಳಿಸ್ತಾರೆ. ಆದರೆ, ಗೆಸ್ಟ್‌ಗಳ ರೂಲ್ಸ್‌ಗೆ ಗಿಲ್ಲಿ ಕ್ಯಾರೆ ಅನ್ನಲ್ಲ. ಎಲ್ಲರಿಗಿಂತ ಮುಂಚೆ ಊಟ ಬಡಿಸಿಕೊಂಡು ತಿನ್ನಲು ಮುಂದಾಗ್ತಾರೆ.
ಗೆಸ್ಟ್‌ಗಳು ಅವರಿಗೆ ಬೇಕಾದ ಸೇವೆಯಲ್ಲಿ ರೂಲ್ಸ್ ಹಾಕಬೇಕು.. ಊಟ ಹಾಕ್ಕೊಂಡು ಮಾಡ್ರಣ್ಣ ತಲೆ ಕೆಡಿಸಿಕೊಳ್ಳಬೇಡಿ.. ನಮ್ಮದರಲ್ಲಿ ರೂಲ್ಸ್ ಮಾಡೋಕೆ ಆಗಲ್ಲ ಅವರ ಕೈಲಿ..’ ಅಂತ ಗಿಲ್ಲಿ ಸ್ಪರ್ಧಿಗಳಿಗೆ ಹೇಳಿ ಊಟ ಬಡಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ರಕ್ಷಿತಾ ಊಟ ತೆಗೆದುಕೊಂಡು ಹೋಗ್ತಿದ್ದಾರೆ. ಉಗ್ರಂ ಮಂಜು ಎಂಟ್ರಿ ಕೊಡ್ತಾರೆ.
‘ರಕ್ಷಿತಾ, ನೀನ್ಯಾಕೆ ಅದನ್ನ ತೆಗೆದುಕೊಂಡು ಹೋಗ್ತಿದ್ದೀಯಾ?.. ನಾವೇನು ಇಲ್ಲಿ ಆಟ ಆಡೋಕೆ ಬಂದಿದ್ದೀವಾ ಅಭಿ.. ಅವ್ನು ಬೋಂಡಾ ತಿನ್ಕೊಂಡು ಆರಾಮಾಗಿ ಅವ್ನೆ.. ನೀವು ಇಷ್ಟು ಜನ ಕಾಯ್ತಿದ್ದೀರಾ ಹೊಟ್ಟೆ ಹಸ್ಕೊಂಡು.. 12 ಜನ ಅವ್ನಿಗೆ ಹೇಳೋಕಾಗಲ್ಲ, ನಿಮಗೆ ನಾಚಿಕೆ ಆಗಲ್ವಾ?.. ಇಲ್ಲ ನಾನು ತೋರಿಸ್ತೀನಿ ಬೇರೆ ಆಟ’ ಅಂತ ಸ್ಪರ್ಧಿಗಳಿಗೆ ಉಗ್ರಂ ಮಂಜು ಕ್ಲಾಸ್ ತೆಗೆದುಕೊಂಡಿದ್ದಾರೆ.
