ಉದಯವಾಹಿನಿ, ದೆಹಲಿ : ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಜಿತೇಂದ್ರ ಅಲಿಯಾಸ್ ಜಿತು ಎಂಬ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿ ಒಟ್ಟು 28 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಅಪರಾಧ ಎಸಗಿದ ನಂತರ ಪೊಲೀಸರ ಕೈಗೆ ಸಿಗದಂತೆ ತನ್ನ ಬೋಳಾದ ತಲೆಗೆ ವಿಗ್ ಧರಿಸಿ ವೇಷ ಬದಲಾಯಿಸುತ್ತಿದ್ದ. ಹೀಗಾಗಿ ಪೊಲೀಸರಿಗೆ ಈತನನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.‌ ಸದ್ಯ ಕುಖ್ಯಾತ ಹಿಸ್ಟರಿ- ಶೀಟರ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಪೊಲೀಸರು ಬಂಧಿಸಿದ್ದಾರೆ.

ಮೈನ್‌ಪುರಿಯಲ್ಲಿ ವಾಸ ಮಾಡುತ್ತಿದ್ದ ಜಿತೇಂದ್ರ, ತನ್ನ ಬೋಳಾದ ತಲೆಯನ್ನು ವಂಚನೆಯ ಸಾಧನವಾಗಿ ಬಳಕೆ ಮಾಡುತ್ತಿದ್ದ. ಹೆಚ್ಚಿನ ಅಪರಾಧಗಳನ್ನು ಆತ ಬೋಳು ತಲೆಯಾಗಿದ್ದಾಗ ಮಾಡುತ್ತಿದ್ದು ಅಪರಾಧ ಬಳಿಕ‌ ತನ್ನ ತಲೆಯ ಮೇಲೆ ವಿಗ್ ಧರಿಸಿ ಬದಲಾಯಿಸಿಕೊಳ್ಳುತ್ತಿದ್ದ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಸಿಟಿವಿ ದೃಶ್ಯದಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಈತನ ಎರಡು ವಿಭಿನ್ನ ರೂಪಗಳ ಕಂಡುಬರುತ್ತಿದ್ದರಿಂದ ಆತನ ಗುರುತನ್ನು ಖಚಿತಪಡಿಸಿ ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಆತ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ.

Leave a Reply

Your email address will not be published. Required fields are marked *

error: Content is protected !!