
ಉದಯವಾಹಿನಿ, ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಾವು ಏನು ಸೇವಿಸುತ್ತೇವೋ, ಅದು ದಿನವಿಡೀ ನಮ್ಮ ಆರೋಗ್ಯದ ಮೇಲೆಯೇ ನೇರವಾಗಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ದಿನದ ಮೊದಲ ಆಹಾರ ಎಂದಿಗೂ ಪೌಷ್ಟಿಕವಾಗಿಯೇ ಇರಬೇಕು. ಬೆಡ್ ಕಾಫಿ ಅಥವಾ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸುತ್ತಾರೆ.
ಕೆಲವರಿಗೆ ಈ ಎದ್ದ ಕೂಡಲೇ ಕಾಫಿ ಅಥವಾ ಚಹಾ ಕುಡಿಯದಿದ್ದರೆ ಮನಸ್ಸಿಗೆ ಸಮಾಧಾನ ಆಗುವುದಿಲ್ಲ, ದಿನವೆಲ್ಲ ಎನ್ನೋ ಕಳೆದುಕೊಂಡಂತೆ ಇರುತ್ತಾರೆ. ಚಹಾ ಇಲ್ಲದೇ ಆ ದಿನ ಪೂರ್ಣವೇ ಆಗುವುದಿಲ್ಲ ಅನ್ನೋ ಭಾವ ಅವರದ್ದು! ಆದರೆ ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿದ್ದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವುದು ವೈದ್ಯರ ಅಭಿಪ್ರಾಯ. ಎಂತಹ ಪರಿಸ್ಥಿತಿಯಲ್ಲಿ ಆಯ್ಯೋ ಚಹಾ ಕುಡಿಯದೇ ಹೇಗೆ ಇರೋದು ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಚಿಂತೆಗೆ ನಾವು ಉತ್ತರ ಹೇಳುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ನೀವು ಶುಂಠಿ ಟೀ ಸೇವಿಸಿ. ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ನಿಮಗೂ ಟೀ ಕುಡಿದ ಅನುಭವವನ್ನು ನೀಡುತ್ತದೆ. ಹೌದು, ಶುಂಠಿ ಅಜೀರ್ಣ, ವಾಕರಿಕೆಗೆ ಇತ್ಯಾದಿ ಅನಾರೋಗ್ಯ ಸಮಸ್ಯೆಗಳಿಗೆ ಒಳ್ಳೆಯ ಮನೆಮದ್ದಾಗಿದ್ದು, ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ಕಡಿಮೆ ಮಾಡಲಿದೆ. ಇದರೊಂದಿಗೆ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಇದು ಉತ್ಕರ್ಷಣ ನಿರೋಧಕ ಗುಣಗಳನ್ನ ಹೊಂದಿದೆ. ಇದು ಆರೋಗ್ಯಕರ ಜೀವಕೋಶಗಳನ್ನ ರಕ್ಷಿಸುತ್ತದೆ, ರಕ್ತದೊತ್ತಡವನ್ನ ನಿಯಂತ್ರಿಸಲು ಮತ್ತು ರಕ್ತ ಪರಿಚಲನೆಯನ್ನ ಸುಧಾರಿಸಲು ಸಹ ಸಹಾಯಕವಾಗಿದೆ. ಹಾಗಾದ್ರೆ ಬನ್ನಿ ಈ ಚಳಿಗಾಲದಲ್ಲಿ ಬೆಳಿಗ್ಗೆ ಶುಂಠಿ ಚಹಾ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ನೋಡೋಣ.
