ಉದಯವಾಹಿನಿ, ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್‌ ಶೇರಿಂಗ್‌ ಪಾಲಿಟಿಕ್ಸ್‌ ಜೋರಾಗುತ್ತಿದ್ದಂತೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗಳು ಸಹ ಬಹಳ ಜೋರಾಗಿಯೇ ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದಿತ್ತು. ಇಂದು ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲಿ ಪವರ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದಿದ್ದು, ಈ ಉಪಹಾರ ಕೂಟದಲ್ಲಿ ಭಾಗಿಯಾದ ಸಿದ್ದರಾಮಯ್ಯ ನಾಟಿ ಕೋಳಿ ಸಾರು , ಇಡ್ಲಿ ಸವಿದರು. ನಮ್ಮ ಕರ್ನಾಟಕದ ಈ ನಾಟಿ ಕೋಳಿ ಸಾರಿನ ವಿಶೇಷತೆಗಳ ಬಗ್ಗೆ ತಿಳಿಯೋಣ.

ನಾಟಿಕೋಳಿ ಸಾರಿನ ವಿಶೇಷತೆಗಳೇನು?: ನಾಟಿಕೋಳಿ ಸಾರು ನಾನ್‌ವೆಜ್‌ ಪ್ರಿಯರ ಫೇವರೆಟ್‌ ರೆಸಿಪಿ. ಸಿಎಂ ಸಿದ್ದರಾಮಯ್ಯ ಅವರಿಗೂ ನಾಟಿಕೋಳಿ ಸಾರು ಎಂದ್ರೆ ಸಖತ್ ಇಷ್ಟವಂತೆ. ವಾಣಿಜ್ಯಿಕವಾಗಿ ಬೆಳೆಯುವ ಬ್ರಾಯ್ಲರ್‌ ಕೋಳಿಗೆ ಹೋಲಿಸಿದರೆ ನಾಟಿ ಕೋಳಿ ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ.

ಈ ನಾಟಿ ಕೋಳಿಗಳನ್ನು ವಿಶೇಷವಾಗಿ ಹಳ್ಳಿಕಡೆಗಳಲ್ಲಿಯೇ ಸಾಕಾಣೆ ಮಾಡಲಾಗುತ್ತದೆ. ನೈಸರ್ಗಿಕ ವಿಧಾನಗಳ ಮೂಲಕವೇ ಸಾಕಾಣೆ ಮಾಡಲಾಗುವ ಕಾರಣ ಅವು ಅಲ್ಲಿ ಅಕ್ಕಿ, ಗೋಧಿ, ಹುಲ್ಲು, ಕೀಟಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ನಾಟಿಕೋಳಿಗಳು ಸಖತ್ ರುಚಿಕರವಾಗಿರುವುದು ಮಾತ್ರವಲ್ಲದೆ ಅಧಿಕ ಪ್ರೋಟಿನ್‌, ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರವೂ ಹೌದು. ಬ್ರಾಯ್ಲರ್‌ಗಿಂತ ತಿನ್ನಲು ಈ ಕೋಳಿಗಳೇ ಉತ್ತಮ ಎಂದು ಹೇಳುತ್ತಾರೆ. ನಮ್ಮ ಕರ್ನಾಟಕದಲ್ಲಿ ಈ ನಾಟಿಕೋಳಿ ಸಾರು ಸಖತ್‌ ಫೇಮಸ್.‌ ಇಡ್ಲಿ, ಮುದ್ದೆಗೆ ನಾಟಿ ಕೋಳಿ ಸಾರು ಸೂಪರ್‌ ಕಾಂಬಿನೇಷನ್‌. ಈ ಅದ್ಭುತ ಸಾರಿನ ಟೇಸ್ಟ್‌ ತಿಂದವರಿಗಷ್ಟೇ ಗೊತ್ತು.

 

Leave a Reply

Your email address will not be published. Required fields are marked *

error: Content is protected !!