ಉದಯವಾಹಿನಿ, ಚಳಿಗಾಲದಲ್ಲಿನ ಶೀತ ವಾತಾವರಣದ ಕಾರಣದಿಂದಾಗಿ ತ್ವಚೆ ತುಂಬಾನೇ ಡ್ರೈ ಆಗುತ್ತದೆ ಮತ್ತು ಮುಖದ ಕಾಂತಿಯೇ ಮಾಯವಾಗುತ್ತದೆ. ಅದಕ್ಕಾಗಿ ಈ ಸಮಯದಲ್ಲಿ ಹೆಚ್ಚಿನವರು ದುಬಾರಿ ಕ್ರೀಮ್‌, ಲೋಷನ್‌ಗಳ ಮೊರೆ ಹೋಗ್ತಾರೆ. ತ್ವಚೆಗೆ ಬಾಹ್ಯ ಆರೈಕೆಯ ಜೊತೆಗೆ ಒಳಗಿನಿಂದಲೂ ಸಾಕಷ್ಟು ಪೋಷಣೆ ಬೇಕಾಗುತ್ತದೆ. ಇದಕ್ಕಾಗಿ ಈ ನೀವು ಒಂದಷ್ಟು ಜ್ಯೂಸ್‌ಗಳನ್ನು ಚಳಿಗಾಲದಲ್ಲಿ ಸೇವನೆ ಮಾಡಬೇಕು. ಇವು ನಿಮ್ಮ ತ್ವಚೆಗೆ ಪೋಷಣೆ ನೀವುಡುವದರ ಜೊತೆಗೆ ನಿಮ್ಮ ಮುಖ ಈ ಚಳಿಗಾಲದಲ್ಲೂ ಚಂದ್ರನಂತೆ ಕಾಂತಿಯುತವಾಗಿ ಹೊಳೆಯಲು ಸಹಾಯ ಮಾಡುತ್ತದೆ.

ಮುಖದ ಹೊಳಪನ್ನು ಹೆಚ್ಚಿಸಲು ಸಹಕಾರಿ ಈ ಜ್ಯೂಸ್: ಸೌತೆಕಾಯಿ ರಸ: ಚಳಿಗಾಲದಲ್ಲಿ ಸೌತೆಕಾಯಿ ರಸ ಕುಡಿಯುವುದರಿಂದ ನಿಮ್ಮ ಚರ್ಮವು ಹೈಡ್ರೇಟ್ ಆಗುತ್ತದೆ. ಮುಖ ಯಾವಾಗಲೂ ಕಾಂತಿಯುತವಾಗಿರುತ್ತದೆ. ನೀವು ಪ್ರತಿದಿನ ಅಥವಾ ವಾರಕ್ಕೆ ಕನಿಷ್ಠ 2 ಬಾರಿ ಸೌತೆಕಾಯಿ ಜ್ಯೂಸ್‌ ಕುಡಿಯಿರಿ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಚರ್ಮವನ್ನು ಪುನರ್ಯೌವನಗೊಳಿಸುತ್ತವೆ. ಇದು ಚರ್ಮ ಒಣಗುವುದನ್ನು ತಡೆಯುತ್ತದೆ. ಇದು ಕಣ್ಣುಗಳ ಸುತ್ತಲಿನ ಕಪ್ಪು ವೃತ್ತಗಳನ್ನು ಸಹ ತೆಗೆದುಹಾಕುತ್ತದೆ.

ಟೊಮೆಟೊ ರಸ:‌ ಹೊಳೆಯುವ ತ್ವಚೆ ನಿಮ್ಮದಾಗಬೇಕೆಂದರೆ ಟೊಮೆಟೊ ರಸವನ್ನು ಕುಡಿಯಬಹುದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಲೈಕೋಪೀನ್ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಸುಂದರಗೊಳಿಸುವುದರ ಜೊತೆಗೆ ಮೊಡವೆ ಸಮಸ್ಯೆಯನ್ನೂ ದೂರ ಮಾಡುತ್ತದೆ. ಕ್ಯಾರೆಟ್ ಜ್ಯೂಸ್: ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಬಯಸಿದರೆ, ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು, ಮುಖದಿಂದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!