ಉದಯವಾಹಿನಿ, ಮಂಡ್ಯ: ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಮುಂದೆ ಇಂದು ಮಧ್ಯಾಹ್ನ ಭಾರೀ ಹೈಡ್ರಾಮಾ ನಡೆದಿದೆ. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಂಕೀರ್ತನಾ ಯಾತ್ರೆಯ ವೇಳೆ, ಹನುಮ ಮಾಲಾಧಾರಿಗಳು ಜಾಮೀಯಾ ಮಸೀದಿಯ ಮುಂದುಗಡೆಯಿಂದ ಸಾಗಿಹೋಗುವಾಗ ಇದ್ದಕ್ಕಿದ್ದ ಹಾಗೆ ಜಾಮಿಯಾ ಮಸೀದಿಯೊಳಗೆ ನುಗ್ಗಿದ್ದಾರೆ. ಅದರಿಂದಾಗಿ, ಜಾಮಿಯಾ ಮಸೀದಿ ಬಳಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಹನುಮ ಧ್ವಜ ಹಿಡಿದ ಸಾವಿರಾರು ಭಕ್ತರು ಕೂಡ ಯಾತ್ರೆಯಲ್ಲಿ ಭಾಗಿಯಾಗಿದ್ರು. ಗಂಜಾಂನ ಹಜರತ್ ಸೈಯದ್ ಜವಾರ್ ದರ್ಗಾದ ಮುಂದೆ ಹನುಮ ಮಾಲಾಧಾರಿಗಳ ಯಾತ್ರೆ ಸಾಗಿಬಂದು ಜಾಮೀಯಾ ಮಸೀದಿ ತಲುಪಿತ್ತು. ಈ ವೇಳೆ ಸಂಕೀರ್ತನ ಯಾತ್ರೆ. ಜಾಮೀಯಾ ಮಸೀದಿ ಕಡೆಗೆ ನುಗ್ಗಲು ಮಾಲಧಾರಿಗಳು ಯತ್ನಿಸಿದ್ರು. ಇದರಿಂದ ಮಾಲಧಾರಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ-ನೂಕಾಟ ನಡೆಯಿತು. ಸಂಕೀರ್ತನಾ ಯಾತ್ರೆ ಜಾಮೀಯಾ ಮಸೀದಿ ತಲುಪಿದಂತೆ ಮಸೀದಿ ಬಳಿ ಜೈ ಶ್ರೀರಾಮ್, ಜೈ ಹನುಮಾನ್, ನಾವೆಲ್ಲಾ ಒಂದು ನಾವೇಲ್ಲಾ ಹಿಂದೂ.. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವುʼ ಎಂದು ಘೋಷಣೆ ಕೇಳಿಬಂದಿದೆ. ಮಸೀದಿ ಬಳಿಯ ವೃತ್ತದಲ್ಲಿ ನಿಂಬೆ ಹಣ್ಣು ಇಟ್ಟು ಕರ್ಪೂರ ಹಚ್ಚಿದ ಮಾಲಧಾರಿಗಳು… ಆ ಜಾಗ ನಮ್ಮದು ಎಂದು ಘೋಷಣೆʼ ಕೂಗಿದ್ದಾರೆ.
ಜಾಮೀಯಾ ಮಸೀದಿ ಬಳಿ ಭಾರೀ ಸಂಖ್ಯೆಯ ಹನುಮ ಮಾಲಾಧಾರಿಗಳು ಸೇರುತ್ತಿದ್ದಂತೆ ಜಾಮೀಯಾ ಮಸೀದಿ ಸುತ್ತ ಭಾರೀ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ. ಮಾಲಾಧಾರಿಗಳ ನಡುವೆ ತಳ್ಳಾಟ ನೂಕಾಟ ಉಂಟಾದ ಬೆನ್ನಲ್ಲೇ ಮಾಲಧಾರಿಗಳನ್ನ ಮನವೊಲಿಸಿ ಪೊಲೀಸರು ಕಳುಹಿಸಿದ್ದಾರೆ.
