ಉದಯವಾಹಿನಿ, ಮಂಗಳೂರು: ನನ್ನ ವೈಯಕ್ತಿಕ ಅಭಿಪ್ರಾಯ ಕೇಳಿದರೆ ಡಿಕೆಶಿ ಇವತ್ತೇ ಸಿಎಂ ಆಗಬೇಕು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಕ್ಕೆ ಬಹಳ ಶ್ರಮ ಪಟ್ಟಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಆಸೆ, ನನ್ನ ಸಂಕಲ್ಪ, ನನ್ನ ವ್ರತ ಎಲ್ಲವೂ ಇದೆ ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ( ಹೇಳಿದ್ದಾರೆ. ಮಂಗಳೂರಿನಲ್ಲಿ (ಮಾತನಾಡಿದ ಅವರು, ನಾನು ತಾಯಿ ಮಂಗಳಾಂಬೆಯ ಭಕ್ತ. ಅವರ ಬಳಿ ನಾನು ಸಂಕಲ್ಪ ಮಾಡಿದ್ದೇನೆ. ಮುಂಬರುವ ನನ್ನ ಕಾರ್ಯಕ್ರಮದಲ್ಲಿ ಡಿಕೆಶಿ ಸಿಎಂ ಆಗಿ ಕುರ್ಚಿ ಅಲಂಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇಣುಗೋಪಾಲ್‌ರವರು ಪಕ್ಷದ ಪ್ರಧಾನ ಕಾರ್ಯದರ್ಶಿ. ನಮ್ಮ ನಾಯಕರು ಬರುವಂತಹ ಸಂದರ್ಭದಲ್ಲಿ ಮೊಟ್ಟಮೊದಲು ಜೈಕಾರ ಕೂಗುವುದು ನಮ್ಮ ನಾಯಕ ರಾಹುಲ್ ಗಾಂಧಿಗೆ. ಅದಾದ ಮೇಲೆ ನಮ್ಮ ಘೋಷಣೆ ಎಐಸಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ. ಅದಾದ ಪ್ರತಿ ಕಾರ್ಯಕ್ರಮದಲ್ಲಿ ನಾವು ಜೈಕಾರ ಕೂಗುವುದು ಮೇಲೆ ನಮ್ಮ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಗೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಜೋಡೆತ್ತಾಗಿ ಈ ರಾಜ್ಯದಲ್ಲಿ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನಮ್ಮ ಅಗ್ರಗಣ್ಯ ನಾಯಕರು, ಅವರು ಎಂದಿಗೂ ಅಧಿಕಾರದ ಹಿಂದೆ ಹೋದವರಲ್ಲ. ಸಿದ್ದರಾಮಯ್ಯ ಯಾವತ್ತೂ ಯುವಕರಿಗೆ ಅವಕಾಶ ಕೊಟ್ಟಂಥವರು. ಡಿಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡುವುದಿದ್ದರೆ ಸಿದ್ದರಾಮಯ್ಯನವರೇ ಮಾಡುತ್ತಾರೆ. ನಮ್ಮಲ್ಲಿ ಇರುವುದು ಒಂದೇ ಬಣ, ಕಾಂಗ್ರೆಸ್ ಬಣ. ಹೈಕಮಾಂಡ್ ಏನು ತಿರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ಧ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!