ಉದಯವಾಹಿನಿ, ಜಗತ್ತಿನಲ್ಲಿ ಪರಸ್ಪರ ರಾಷ್ಟ್ರಗಳು ಒಂದಲ್ಲ ಒಂದು ಕಾರಣಕ್ಕೆ ಕಚ್ಚಾಡುತ್ತಿವೆ. ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣವು, ಚೀನಾ ತೈವಾನ್, ಇರಾನ್-ಇಸ್ರೇಲ್ ಉದ್ವಿಗ್ನತೆಗಳು, ಭಾರತ-ಪಾಕ್, ಉತ್ತರ ಕೋರಿಯಾ ಹೀಗೆ ಎಲ್ಲೆಡೆ ಕಿಚ್ಚು ಹೊತ್ತಿ ಉರಿಯುತ್ತಲೇ ಇದೆ.
ಈ ಸಂಘರ್ಷಗಳು ಮೂರನೇ ಮಹಾಯುದ್ಧಕ್ಕೆ ಕಾರಣವಾದ್ರೂ ಅಚ್ಚರಿ ಇಲ್ಲ. ಒಂದೊಮ್ಮೆ ಪರಮಾಣು ಯುದ್ಧವು ಭುಗಿಲೆದ್ದರೆ, ಭೂಮಿಯ ಮೇಲೆ ಯಾವ ಜಾಗ ಸುರಕ್ಷಿತವಾಗಿರುತ್ತದೆ? ಅನ್ನೋದು ಒಂದು ಚರ್ಚಿತ ಪ್ರಶ್ನೆ.
ದುರಂತಕ್ಕೆ 72 ನಿಮಿಷಗಳು
ಈ ಒಂದು ಪ್ರಶ್ನೆಯನ್ನು ತನಿಖಾ ಪತ್ರಕರ್ತೆ ಆನಿ ಜಾಕೋಬ್ಸೆನ್ ಚರ್ಚೆ ಮಾಡುವಂತೆ ಮಾಡಿದ್ದಾರೆ. ದಿ ಡೈರಿ ಆಫ್ ಎ ಸಿಇಒ ಪಾಡ್‌ಕ್ಯಾಸ್ಟ್‌ನಲ್ಲಿನ ಸಂದರ್ಶನದಲ್ಲಿ, ಜಾಕೋಬ್‌ಸನ್ ಊಹಿಸಲಾಗದ ವಿನಾಶದ ಸಮಯವನ್ನು ಬಹಿರಂಗಪಡಿಸಿದ್ದಾರೆ.ಇವರು ಮೂರನೇ ಮಹಾಯುದ್ಧ ನಡೆದರೆ 72 ನಿಮಿಷಗಳಲ್ಲಿ, ಕ್ಷಿಪಣಿ ಉಡಾವಣೆಗಳ ಸರಣಿಯು ಶತಕೋಟಿ ಜನರನ್ನು ಬಲಿ ಪಡೆಯುತ್ತದೆ, ನಗರಗಳ ಸೈನ್ಯವನ್ನು ನಾಶ ಮಾಡಬಹುದು ಮತ್ತು ಜಾಗತಿಕ ಪರಿಸರ ಕುಸಿತ ಕಾಣಬಹುದು. ಪರಮಾಣು ಚಳಿಗಾಲ, ಬೃಹತ್ ಓಝೋನ್ ಸವಕಳಿ, ಬೆಳೆ ವೈಫಲ್ಯಗಳು, ಕ್ಷಾಮ ಇತ್ಯಾದಿಗಳು ಸಂಭವಿಸುತ್ತವೆ ಎಂದು ಅದರಲ್ಲಿ ಉಲ್ಲೇಖಿಸಿದ್ದಾರೆ.ಈ ವಿನಾಶವು ಸ್ಫೋಟದೊಂದಿಗೆ ಕೊನೆಗೊಳ್ಳುವುದಿಲ್ಲ. ಜಾಗತಿಕ ಹವಾಮಾನವು ದುರಂತದ ಹಾನಿಯನ್ನು ಅನುಭವಿಸುತ್ತದೆ ಎಂದು ಎಚ್ಚರಿಸಿದ ವಾತಾವರಣ ವಿಜ್ಞಾನದಲ್ಲಿ ಪರಿಣಿತರಾದ ಪ್ರೊಫೆಸರ್ ಬ್ರಿಯಾನ್ ಟೂನ್ ಅವರ ಸಂಶೋಧನೆಯನ್ನು ಜಾಕೋಬ್ಸೆನ್ ಉಲ್ಲೇಖಿಸಿದ್ದಾರೆ.
ಈ ಕಾಲ್ಪನಿಕ ಪರಿಣಾಮದಲ್ಲಿ, ಪ್ರಪಂಚದ ಹೆಚ್ಚಿನ ಭಾಗವು ಪರಿಸರ ಮತ್ತು ಸಾಮಾಜಿಕವಾಗಿ ವಾಸಯೋಗ್ಯವಲ್ಲದಂತಾಗುತ್ತದೆ. ಹಾಗಾದ್ರೆ ಭೂಮಿ ಮೇಲೆ ಸುರಕ್ಷಿತ ಜಾಗ ಅಂತಾ ಇರೋದೇ ಇಲ್ವಾ? ಈ ಪ್ರಶ್ನೆಗೆ ಉತ್ತರವನ್ನು ಅವರೇ ನೀಡಿದ್ದಾರೆ ನೋಡಿ.
