ಉದಯವಾಹಿನಿ, ಟೆಹ್ರಾನ್: ಇಸ್ರೇಲ್ ಹಾಗೂ ಅಮೆರಿಕ ವಿರುದ್ಧದ ಯುದ್ಧ ಮುಂದುವರಿಸುವ ಬಗ್ಗೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸುಳಿವು ನೀಡಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಗಾಯಗೊಂಡು ಅಜ್ಞಾತ ಸ್ಥಳದಲ್ಲಿರುವ ಮೊಜ್ತಬಾ ಖಮೇನಿ, ಕದನ ವಿರಾಮವನ್ನು ) ತಿರಸ್ಕರಿಸಿದ್ದಾರೆ. ಎರಡು ಮಧ್ಯವರ್ತಿಗಳ ದೇಶಗಳ ಮೂಲಕ ಅಮೆರಿಕ ಸಂದೇಶವನ್ನು ರವಾನಿಸಿದ್ದು, ಇದನ್ನು ಮೊಜ್ತಬಾ ಖಮೇನಿ ತಿರಸ್ಕರಿಸಿರೋದಾಗಿ ಹೇಳಲಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಮಂಡಿಯೂರಿ ತಪ್ಪೊಪ್ಪಿಕೊಳ್ಳುವವರೆಗೂ, ಆದ ನಷ್ಟಕ್ಕೆ ಪರಿಹಾರ ಕೊಡುವವರೆಗೂ ಶಾಂತಿ ಸ್ಥಾಪನೆಯ ಮಾತೇ ಇಲ್ಲ ಎಂದು ಮೊಜ್ತಬಾ ಖಮೇನಿ ಸಂದೇಶ ರವಾನಿಸಿದ್ದಾರೆ. ಸದ್ಯ ಗೌಪ್ಯ ಸ್ಥಳದಲ್ಲಿ ಮೊಜ್ತಬಾ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷ ಆರಂಭವಾಗಿ 18 ದಿನಗಳು ಕಳೆದಿದೆ. ಈ ನಡುವೆ ಇರಾನ್ ಗಾಯದ ಮೇಲೆ ಇಸ್ರೇಲ್ ಉಪ್ಪು ಸವರಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಜೊತೆಗೆ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹಾಲಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಕೋಮಾದಲ್ಲಿದ್ದರೆ ಎನ್ನಲಾಗುತ್ತಿರುವ ನಡುವೆ ಇರಾನ್‌ನ ನಾಯಕತ್ವ ಈಗ ಮತ್ತಷ್ಟು ದುರ್ಬಲಗೊಂಡಿದೆ. ಇದ

Leave a Reply

Your email address will not be published. Required fields are marked *

error: Content is protected !!