ಉದಯವಾಹಿನಿ, ಇರಾನ್​ ಮೇಲೆ ಅಮೆರಿಕ ಅನಗತ್ಯವಾಗಿ ಯುದ್ಧ ಮಾಡುತ್ತಿದೆ ಎಂದು ಆರೋಪಿಸಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅಮೆರಿಕ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್​ ಹೇಳಿಕೆಯನ್ನು ಶ್ವೇತಭವನ ನಿರಾಕರಿಸಿದೆ. ಟೆಹ್ರಾನ್ ನಿಜವಾಗಿಯೂ ಅಮೆರಿಕದ ಮೇಲೆ ದಾಳಿಯನ್ನು ಯೋಜಿಸುತ್ತಿದೆ ಎಂಬುದಕ್ಕೆ ಬಲವಾದ ಪುರಾವೆಗಳು ಇವೆ ಎಂದು ಹೇಳಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್​ ಲೀವಿಟ್, ಕೆಂಟ್​ ಆರೋಪಗಳು ಸುಳ್ಳು ಎಂದಿದ್ದು, ಇರಾನ್ ಅಮೆರಿಕದ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿ ಬಲವಾದ ಪುರಾವೆಗಳಿವೆ. ಇವುಗಳನ್ನು ಗುಪ್ತಚರ ಮಾಹಿತಿಯ ಬಹು ಮೂಲಗಳಿಂದ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷ ಟ್ರಂಪ್​ ಸ್ಪಷ್ಟವಾಗಿ ಹೇಳಿದಂತೆ, ಅಮೆರಿಕದ ಮೇಲೆ ಇರಾನ್​ ದಾಳಿ ಮಾಡಲಿದೆ ಎಂಬುದಕ್ಕೆ ಅವರ ಬಳಿ ಸಾಕಷ್ಟು ಪುರಾವೆಗಳಿವೆ. ಈ ಪುರಾವೆಗಳನ್ನು ಹಲವು ಮೂಲಗಳಿಂದ ಸಂಗ್ರಹಿಸಲಾಗಿದೆ. ಅಧ್ಯಕ್ಷ ಟ್ರಂಪ್ ಎಂದಿಗೂ ವಿದೇಶಿ ಎದುರಾಳಿಯ ವಿರುದ್ಧ ಸುಮ್ಮನೆ ಮಿಲಿಟರಿ ನಿಯೋಜಿಸುವ ನಿರ್ಧಾರವನ್ನು ಮಾಡಲ್ಲ ಎಂದು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.ಇರಾನ್ ಭಯೋತ್ಪಾದನೆಯ ಪ್ರಾಯೋಜಕ ದೇಶವಾಗಿದ್ದು, ಟೆಹ್ರಾನ್​ ಆಡಳಿತವು ಅಮೆರಿಕನ್ನರನ್ನು ಕೊಲ್ಲುತ್ತಿದೆ. ಅಮೆರಿಕದ ವಿರುದ್ಧ ಸಂಘರ್ಷ ನಡೆಸುತ್ತಿದ್ದು, ಪದೇ ಪದೆ ಬಹಿರಂಗ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.ಇರಾನ್ ತನ್ನ ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ. ಹಾಗೇ ನೌಕೆಗಳನ್ನು ನಿಯೋಜಿಸುತ್ತಿದೆ. ಇರಾನ್​ ಹಲವು ಬಾರಿ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸುವ ಮಾತುಕತೆಗಳನ್ನೂ ನಿರಾಕರಿಸಿದೆ. ಈ ಬಗ್ಗೆ ಅಮೆರಿಕ ನೀಡಿದ ಹಲವು ಅವಕಾಶಗಳನ್ನು ಇರಾನ್​ ತಳ್ಳಿ ಹಾಕಿದೆ. ಆದರೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದು ಅವರ ಮೂಲಭೂತ ಗುರಿಯಾಗಿದೆ ಎಂದು ಟೀಕಿಸಿದರು ಎಂದರು.

ಇಸ್ರೇಲ್ ಜೊತೆಗಿನ ಜಂಟಿ ಮಿಲಿಟರಿ ಕಾರ್ಯಾಚರಣೆಯು ಅಮೆರಿಕನ್ನರ ಜೀವಗಳಿಗೆ ಅಪಾಯವನ್ನು ಕಡಿಮೆ ಮಾಡುವುದರ ಜೊತೆಗೆ ಸನ್ನಿಹಿತ ಬೆದರಿಕೆ ಎದುರಿಸಬಹುದು ಎಂದು ಅಧ್ಯಕ್ಷ ಟ್ರಂಪ್ ಅಂತಿಮವಾಗಿ ನಿರ್ಧರಿಸಿದ್ದಾರೆ. ಇರಾನ್​ ವಿರುದ್ಧದ ಅಮೆರಿಕದ ಕಾರ್ಯಾಚರಣೆ ಆಪರೇಷನ್ ಎಪಿಕ್ ಫ್ಯೂರಿ ರಾಷ್ಟ್ರೀಯ ಭದ್ರತೆಗೆ ಅಗತ್ಯವಾಗಿದೆ ಎಂದರು. ಅಧ್ಯಕ್ಷ ಟ್ರಂಪ್​, ಬೇರೆ ದೇಶದ ಪ್ರಭಾವದಿಂದಾಗಿ ಈ ಯುದ್ಧ ಆರಂಭಿಸಿದ್ದಾರೆ ಎಂದು ಕೆಂಟ್​ ಹೇಳಿಕೆಯನ್ನು ಅಲ್ಲಗಳೆದ ಲೀವಿಟ್​, ಇದು ಅವಮಾನಕರ ಮತ್ತು ಹಾಸ್ಯಾಸ್ಪದ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!