ಉದಯವಾಹಿನಿ, ಚಳಿಗಾಲದ ತೀವ್ರತೆ ಎಲ್ಲಾ ಕಡೆ ಹೆಚ್ಚಾಗಿದೆ. ಹೀಗಾಗಿ ಮಳೆಗಾಲದಂತೆ ಚಳಿಗಾಲ ದಲ್ಲೂ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಈ ಸಂದರ್ಭದಲ್ಲಿ ನಮ್ಮ ದೇಹವು ಬೆಚ್ಚಗಿನ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚಾಗಿ ಬಯಸುತ್ತದೆ. ಆದ್ದರಿಂದ ಈ ಶೀತ ವಾತಾವರಣದಲ್ಲಿ ರಾತ್ರಿಯ ಊಟಕ್ಕೆ ಸರಿಯಾದ ಆಹಾರವನ್ನು ಆಯ್ಕೆಮಾಡುವ ಮೂಲಕ ನಿಮ್ಮ ದೇಹವನ್ನು ಆರೋಗ್ಯಯುತವಾಗಿ ಇಡಬಹುದು. ರಾತ್ರಿಯ ಊಟಕ್ಕೆ ಇಂತಹ ಆಹಾರಗಳನ್ನು ಆಯ್ಕೆಗಳನ್ನು ಮಾಡುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡಿ ದೇಹದ ಉಷ್ಣತೆಯನ್ನು ಕಾಪಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಚಳಿಗಾಲದ ಆಹಾರದಲ್ಲಿ ಕೆಲವು ಪೌಷ್ಟಿಕಾಂಶ ಭರಿತ ಈ ಆಹಾರವನ್ನು ಸೇವಿಸಿ.
ಜೋಳ ಅಥವಾ ಬಾಜ್ರಾ ರೊಟ್ಟಿ: ಗೋಧಿ ಅಥವಾ ಅಕ್ಕಿಯ ಬದಲಿಗೆ ಜೋಳ ಅಥವಾ ಬಾಜ್ರಾ ರೊಟ್ಟಿಯನ್ನು ರಾತ್ರಿಯ ಸಮಯ ದಲ್ಲಿ ಸೇವಿಸಿ. ಇವುಗಳು ಫೈಬರ್ ಮತ್ತು ಖನಿಜಗಳನ್ನು ಹೊಂದಿದ್ದು ಕಾರ್ಬೋ ಹೈಡ್ರೇಟ್‌ಗಳನ್ನು ನೀಡುತ್ತವೆ. ಹಾಗಾಗಿ ವಾರದಲ್ಲಿ ಒಂದು ಅಥವಾ ಎರಡು ಭಾರಿ ಬಜ್ರಾ ಅಥವಾ ಜೋಳ ರೊಟ್ಟಿ ಗಳೊಂದಿಗೆ ದಾಲ್ ಅಥವಾ ತರಕಾರಿ ಸಬ್ಜಿಯೊಂದಿಗೆ ಬಿಸಿಯಾಗಿ ಸೇವಿಸಿ.
ಸೊಪ್ಪು ಪದಾರ್ಥಗಳು:ಪಾಲಕ್, ಸರ್ಸನ್, ಮೇಥಿ ಮುಂತಾದ ಸೊಪ್ಪುಗಳು ವಿಟಮಿನ್ ಸಿ, ಕಬ್ಬಿಣ ಮತ್ತು ಫೋಲೇಟ್ ನಿಂದ ತುಂಬಿರುತ್ತವೆ. ಇವುಗಳ ಸೇವೆನೆಯೂ ಚಳಿಗಾಲದ ಸಂದರ್ಭ ಉತ್ತಮ ಪೋಷಕಾಂಶ ಸಾಂದ್ರತೆಯನ್ನು ನೀಡುತ್ತವೆ. ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತವೆ. ಹಾಗಾಗಿ ಹಸಿಯಾದ ಸೊಪ್ಪನ್ನು ದಾಲ್‌ನೊಂದಿಗೆ ಸೇರಿಸಿ ಇದರಿಂದ ವಿಟಮಿನ್ ಸಿ ಹೆಚ್ಚು ಮಾಡುತ್ತದೆ.
ಶುಂಠಿ ಮತ್ತು ಉಷ್ಣ ನೀಡುವ ಮಸಾಲೆಗಳು: ಶುಂಠಿ, ಮೆಣಸು ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳು ಉಷ್ಣ ಉತ್ಪಾದಕವಾಗಿದ್ದು ಚಳಿಗಾಲ ದಲ್ಲಿ ಇವುಗಳ ಸೇವನೆ ಬಹಳಷ್ಟು ಉತ್ತಮ. ಇವುಗಳು ಜೀರ್ಣಕ್ರಿಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಿ ದೇಹಕ್ಕೆ ಬಿಸಿಯಾದ ಅನುಭವ ನೀಡುತ್ತದೆ.
