ಉದಯವಾಹಿನಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗುತ್ತಿದ್ದಾರೆ. ಹಿಂದೆಲ್ಲಾ ಅಪರೂಪಕ್ಕೆ ಅವಶ್ಯಕತೆ ಇದ್ದಲ್ಲಿ ಮಾತ್ರ ಇನ್ಸ್ಟಾಗ್ರಾಂ ಪೋಸ್ಟ್ ಹಾಕುತ್ತಿದ್ದ ರಚ್ಚು ಇದೀಗ ವಾರಕ್ಕೊಂದು ಫೋಟೋಶೂಟ್ ಹಾಗೂ ರೀಲ್ಸ್ ಜೊತೆ ಫ್ಯಾನ್ಸ್ ಜೊತೆ ಎಂಗೇಜ್ ಆಗುತ್ತಿದ್ದಾರೆ.
ಇದೀಗ ಹೊಚ್ಚ ಹೊಸ ರೀಲ್ಸ್ ಶೇರ್ ಮಾಡಿರುವ ರಚಿತಾ ರಾಮ್ ಕೇಸರಿ ಬಣ್ಣದ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‍ನಲ್ಲಿ ನಳನಳಿಸಿದ್ದಾರೆ. ರೀಲ್ಸ್‍ಗೂ ಮುನ್ನ ರಚಿತಾ ಇದೇ ಲುಕ್‍ನಲ್ಲಿ ಫೋಟೋಶೂಟ್ ಶೇರ್ ಮಾಡಿಕೊಂಡಿದ್ದರು. ಕಳೆದ ಕೆಲ ತಿಂಗಳಿಂದ ಸಿನಿಮಾದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿರುವ ರಚ್ಚು ಸಾಕಷ್ಟು ಸಿನಿಮಾ ಅವಕಾಶಗಳನ್ನ ಹೊಂದಿದ್ದಾರೆ. ಕ್ರಿಮಿನಲ್, ಲ್ಯಾಂಡ್‍ಲಾರ್ಡ್, ಅಯೋಗ್ಯ 2 ಸೇರಿದಂತೆ ಅನೇಕ ಚಿತ್ರಗಳು ರಚಿತಾ ಬತ್ತಳಿಕೆಯಲ್ಲಿದೆ.
ರಿಯಾಲಿಟಿ ಶೋ ಜಡ್ಜ್ ಕೂಡಾ ಆಗಿರುವ ರಚಿತಾ ಇಷ್ಟು ದಿನ ಸೋಶಿಯಲ್ ಮೀಡಿಯಾದಿಂದ ಕೊಂಚ ಅಂತರ ಕಾಪಾಡಿಕೊಳ್ಳುತ್ತಿದ್ದರು. ಇದೀಗ ತಮಿಳಿನ ಕೂಲಿ ಚಿತ್ರದ ನಟನೆಯ ಬಳಿಕ ಹೊಸ ಚಾರ್ಮ್‍ಗೆ ಮರಳಿರುವ ರಚ್ಚು ಆಲ್ ಇಂಡಿಯಾ ಫ್ಯಾನ್ಸ್ ಫಾಲೋವಿಂಗ್ ಹೊಂದಿದ್ದಾರೆ. ಹೀಗಾಗಿ ಇನ್ಸ್ಟಾಗ್ರಾಂನಲ್ಲೇ ಭರ್ಜರಿ ಆ್ಯಕ್ಟೀವ್ ಆಗ ತೊಡಗಿದ್ದಾರೆ ರಚ್ಚು. ಕಳೆದ ಅಕ್ಟೋಬರ್‍ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಈ ವರ್ಷ ಮದುವೆ ಆಗೋದಾಗಿಯೂ ಘೋಷಿಸಿರುವ ರಚ್ಚು ದಶಕದಿಂದ ಸಿನಿ ಇಂಡಸ್ಟ್ರಿಯಲ್ಲಿ ಒಂದೇ ಚಾರ್ಮ್ ಉಳಿಸಿಕೊಂಡಿರುವುದು ವಿಶೇಷ.
