ಉದಯವಾಹಿನಿ, ಇದೊಂದು ಉತ್ಕೃಷ್ಟವಾದಹಣ್ಣು. ಇದನ್ನು ಬಡವರಸೇಬುಅಂದರೂ ತಪ್ಪಾಗಲಿಕ್ಕಿಲ್ಲ. ಇದು ಉಷ್ಣ ಪ್ರದೇಶಹಾಗೂ ಸಮಶೀತೋಷ್ಣ ಪ್ರದೇಶದಲ್ಲಿ ಬೆಳೆಯುವಹಣ್ಣು. ಶೀತಗುಣ ಉಳ್ಳದ್ದು ಹಾಗೂ ರುಚಿಕರವಾದದ್ದು, ಉಷ್ಣ ಪ್ರಕೃತಿಯವರಿಗೆ ಹಾಗೂ ಪಿತ್ತ ಪ್ರಕೃತಿಯ ದೇಹವಿರುವವರಿಗೆ ಇದು ಉತ್ತಮ ಆಹಾರ.ವಾತ ಪ್ರಕೃತಿಯವರಿಗೆ ಇದರ ಬೀಜ ಸೇವನೆಯಿಂದ ಹೊಟ್ಟೆನೋವು ಬರುವ ಸಾಧ್ಯತೆ ಇರುವುದರಿಂದ ಯಾರಾದರೂ ಅಲ್ಪ ಸೇವನೆ ಮಾಡುವುದು ಉತ್ತಮ.ಇದರ ಬೇರು, ಎಲೆ, ಹೂ, ಹಣ್ಣುಗಳು ಬಹುಉಪಯುಕ್ತ. ಇದರಲ್ಲಿಜೀವಸತ್ವಗಳಾದ ಎ, ಸಿ, ಇ, ಕೆ, ಸೋಡಿಯಂ, ಪೆÇಟ್ಯಾಶಿಯಂ, ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮೆಗ್ನೆಷಿಯಂ, ನಿಯೋಸಿನ್ ಎಂಬಪೆÇಷಕಾಂಶಗಳು ಇವೆ.ಕಣ್ಣಿನ ಸಮಸ್ಯೆಗೆ: ಸೀಬೆ ಗಿಡದ ಹೂ ಹಾಗೂ ದಾಳಿಂಬೆ ಚಿಗುರು ಎರಡರ ರಸವನ್ನು ತೆಗೆದು ಕಣ್ಣಿಗೆ 2-2 ಹನಿ ಹಾಕುವುದರಿಂದ ಕಣ್ಣುನೋವು, ಕಣ್ಣು ಕೆಂಪಾಗುವಿಕೆ ಕಡಿಮೆ ಆಗುತ್ತದೆ.
ಪಿತ್ತದ ವಿಕಾರಗಳಿಗೆ : ಸೀಬೆ ಹೂ,ಗುಲಾಬಿಹೂ, ಲಾವಂಚ, ಏಲಕ್ಕಿ 2 ಲವಂಗ 2, ಸೇರಿಸಿ ನೀರಿನಲ್ಲಿ ಅರೆದು ಶೋಧಿಸಿ ಸಕ್ಕರೆ, ನಿಂಬೆರಸ ಹಾಕಿ ಕುಡಿಯುವುದರಿಂದ ಪಿತ್ತದ ವಿಕಾರಗಳಾದ ಹೊಟ್ಟೆ ಉರಿ, ಬಾಯಾರಿಕೆ ಎಲ್ಲವೂ ಶಮನವಾಗುತ್ತದೆ.
3.ಪಿತ್ತದ ಗಂಧೆಗಳು: ಇದಕ್ಕೆ ಸೀಬೆಯ ಚಿಗುರೆಲೆ ಮತ್ತು ಚೆಟ್ಟುಮೊಸರಿನಲ್ಲಿ ಅರೆದು ಲೇಪಿಸಿ.
4.ಮಲಬದ್ದತೆಗೆ:ಇದರಲ್ಲಿನಾರಿನಂಶ ಅಧಿಕವಾಗಿರುವುದರಿಂದ ಆಹಾರವು ಜೀರ್ಣವಾಗುವು ದಲ್ಲದೆ, ಮಲಬದ್ಧತೆಯು ನಿವಾರಣೆಯಾಗುತ್ತದೆ.ಊಟದ ನಂತರ ಸೇವಿಸಬೇಕು.
ಅತಿಸಾರ: ಎಳೆಸೀಬೆಕಾಯಿಯನ್ನು ಹೋಳುಮಾಡಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಮಾಡಿ ಮಜ್ಜಿಗೆಯೊಡನೆ ಸೇವಿಸಬೇಕು.
ಆಮಶಂಕೆ: ಸೀಬೆಗಿಡದ ಚಿಗುರೆಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ, ಆರಿದ ನಂತರ ಮಜ್ಜಿಗೆ ಬೆರೆಸಿ ಕುಡಿದರೆ ಆಮಶಂಕೆ ನಿವಾರಣೆಯಾಗುತ್ತದೆ.
ಹಲ್ಲುನೋವಿಗೆ: ಸೀಬೆಗಿಡದ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ, ಅದನ್ನು ಬಾಯಿಗೆ ಹಾಕಿ ಮುಕ್ಕಳಿಸಿಉಗುಳಬೇಕು.ಇದರಿಂದ ನೋವು ಶಮನವಾಗುತ್ತದೆ. ಸೀಬೆಹಣ್ಣನ್ನು ಹಲ್ಲಿನಲ್ಲಿ ಕಚ್ಚಿ ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆಮತ್ತು ವಸಡುಗಳು ಆರೋಗ್ಯಪೂರ್ಣವಾಗುತ್ತವೆ.
ಮೊಡವೆಗೆ: ಈ ಗಿಡದ ಎಲೆಯನ್ನು ಅರೆದು ಮೊಡವೆಗೆ ಹಚ್ಚಿ.
9.ಹೇನು, ಸೀರುವಿಗೆ: ತಲೆಯಲ್ಲಿ ಹೇನು, ಸೀರು ಕಾಣಿಸಿಕೊಂಡಾಗ ಸೀಬೆಎಲೆಯೊಂದಿಗೆ ಬೇವಿನೆಲೆ ಸೇರಿಸಿ ಅರೆದು ರಾತ್ರಿ ಮಲಗುವಾಗ ತಲೆಗೆ ಚೆನ್ನಾಗಿ ಹಚ್ಚಿ. ಬೆಳಿಗ್ಗೆ ತಲೆಗೆ ಸ್ನಾನ ಮಾಡುವುದರಿಂದಹೇನುಗಳನ್ನು ನಾಶಪಡಿಸಬಹುದಾಗಿದೆ.
ಬಾಯಿಹುಣ್ಣಿಗೆ: ಈ ಗಿಡದ ಎಲೆಯನ್ನು ಕಷಾಯ ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣುಗುಣವಾಗುತ್ತದೆ.
