ಉದಯವಾಹಿನಿ, ಇತ್ತೀಚೆಗೆ ಐಟಂ ಡ್ಯಾನ್ಸ್ಗಷ್ಟೇ ಸೀಮಿತ ಎಂಬಂತಿದ್ದ ನಟಿ ತಮನ್ನಾ ಭಾಟಿಯಾ ಇದೀಗ ಜಬರ್ದಸ್ತ್ ಪಾತ್ರದೊಂದಿಗೆ ರೋಚಕತೆ ಸೃಷ್ಟಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಂತಕಥೆ ವಿ. ಶಾಂತಾರಾಮ್‌ನಲ್ಲಿ ನಟಿ ಜಯಶ್ರೀ ಪಾತ್ರದಲ್ಲಿ ನಟಿಸಿದ್ದಾರೆ ತಮನ್ನಾ. ನಟಿಯಾಗಿದ್ದ ಜಯಶ್ರೀ ವಿ ಶಾಂತಾರಾಮ್ ಎರಡನೇ ಪತ್ನಿಯಾಗಿದ್ದರು. ಶಕುಂತಲಾ ಚಿತ್ರದ ಮೂಲಕ ಶಕುಂತಲೆ ಪಾತ್ರದಲ್ಲಿ ನಟಿಸಿ ಭಾರತೀಯ ಸಿನಿಮಾ ಜಗತ್ತಿನಲ್ಲಿ ಮಿನುಗುತಾರೆಯಾದಾಕೆ ಜಯಶ್ರೀ. ಇದೀಗ ವಿ ಶಾಂತಾರಾಮ್ ಚಿತ್ರದ ನಾಯಕಿಯಾಗಿ ತಮನ್ನಾ ಎಂಟ್ರಿಯಾಗಿದೆ. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಅಂದಹಾಗೆ ವಿ.ಶಾಂತಾರಾಮ್ ಪಾತ್ರದಲ್ಲಿ ಯುವನಟ ಸಿದ್ಧಾಂತ್ ಚತುರ್ವೇದಿ ಕಾಣಿಸ್ಕೊಂಡಿದ್ದಾರೆ. ಇದು ಮೂಕಿ ಚಿತ್ರಗಳಿಂದ ವಾಕ್ಚಿತ್ರದವರೆಗಿನ ಸಿನಿಮಾ ಇತಿಹಾಸವನ್ನ ಮೆಲುಕು ಹಾಕುವ ಕಥಾನಕವನ್ನ ಒಳಗೊಂಡಿದ್ದು ನಟ, ನಿರ್ದೇಶಕ, ನಿಮಾಪಕರಾಗಿದ್ದ ವಿ ಶಾಂತಾರಾಮ್ ಬಯೋಪಿಕ್ ಚಿತ್ರವಾಗಿದೆ. ಇದೀಗ ನಾಯಕಿ ಜಯಶ್ರೀ ಜೀವನ ಕಥೆಗೆ ತಮನ್ನಾ ತೆರೆಮೇಲೆ ಜೀವ ತುಂಬಲು ಸಜ್ಜಾಗಿದ್ದಾರೆ. ಮೊದಲ ಲುಕ್‌ನಲ್ಲೇ ವಿಂಟೇಜ್ ಯುಗವನ್ನ ನೆನಪಿಸುತ್ತಾರೆ. ಪೋಸ್ಟರ್‌ನಲ್ಲಿ ತಮನ್ನಾ ತಿಳಿಗುಲಾಬಿ ಬಣ್ಣದ ನೌವರಿ ಶೈಲಿಯ ಸೀರೆ ಧರಿಸಿದ್ದಾರೆ. ಸರಳ ಸುಂದರ ಲುಕ್‌ನಲ್ಲಿ ತಮನ್ನಾ ಗಮನಸೆಳೆದಿದ್ದು, ಈ ಪಾತ್ರ ತಮನ್ನಾ ಕೆರಿಯರ್‌ನಲ್ಲಿ ಬಹಳ ಮುಖ್ಯ ಬ್ರೇಕ್ ಕೊಡುವ ಸಾಧ್ಯತೆ ಕಾಣುತ್ತಿದೆ.

Leave a Reply

Your email address will not be published. Required fields are marked *

error: Content is protected !!