ಉದಯವಾಹಿನಿ, ದೂರದರ್ಶನ’ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಅವರ ಎರಡನೇ ಪ್ರಯತ್ನ ಪೀಟರ್. ಟೈಟಲ್ ಹಾಡಿನ ಮೂಲಕ ಕುತೂಹಲ ಹೆಚ್ಚಿಸಿದ್ದ ಪೀಟರ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಅದ್ಬುತ ಪ್ರಶಂಸೆ ಕಂಡಿತ್ತು. ಸಿನಿಮಾ ಮತ್ತು ತಂಡದ ಮೇಲಿನ ಭರವಸೆ ಈಗ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಸುಂದರಿ ಸುಂದರಿ ಎಂಬ ಗೀತೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಥಿಂಕ್ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಎರಡನೇ ಹಾಡು ʻತಾಯೇ ತಾಯೇʼ ರಿಲೀಸ್ ಆಗಿದೆ.
ʻತಾಯೇ ತಾಯೇʼ ಹಾಡು ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ತಾಯಿ ಮಗನ ಬಾಂಧವ್ಯದ ಈ ಗೀತೆಗೆ ಕನ್ನಡದಲ್ಲಿ ಸುಕೀರ್ತ್ ಶೆಟ್ಟಿ ಸಾಹಿತ್ಯ ಒದಗಿಸಿದ್ದು, ಮಲಯಾಳಂ ಹೊರತುಪಡಿಸಿ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಹಿಂದಿ ಭಾಷೆಯಲ್ಲಿ ಕೂಡ ಈ ಹಾಡು ರಿಲೀಸ್ ಆಗಿರೋದು ವಿಶೇಷ. ಪ್ರತಿಷ್ಠಿತ ಇಷ್ಟರ್ ಮ್ಯೂಸಿಕ್ ಹಿಂದಿ ಹಾಡಿನ ರೈಟ್ಸ್ ತನ್ನದಾಗಿಸಿಕೊಂಡಿದೆ. ಮಲಯಾಳಂನಲ್ಲಿ ರಿಲೀಸ್ ಆಗಿರುವ “ಥಾಯೇ ಥಾಯೇ” ಹಾಡನ್ನು ತುಡುರಮ್ ಖ್ಯಾತಿಯ ಗಾಯಕ ಗೋಕುಲ್ ಗೋಪಕುಮಾರ್ ಅವರು ಹಾಡಿದ್ದಾರೆ. ಗೀತರಚನೆಕಾರ ಸಿಜು ತುರಾವೂರ್ ಸಾಹಿತ್ಯ ಬರೆದಿದ್ದಾರೆ.

ಪೀಟರ್ ಸಿನಿಮಾದ ತಾಯೇ ತಾಯೇ ಹಾಡಿನ ಸ್ಟ್ರಿಂಗ್ ಆರ್ಕೆಸ್ಟ್ರೇಶನ್ ಯುರೋಪಿನ ಬುಡಾಪೆಸ್ಟ್ನಲ್ಲಿ ರೆಕಾರ್ಡ್ ಮಾಡಲಾಗಿದೆ. ಕೆಡಿ ಸಿನಿಮಾದ ಹಾಡುಗಳು ಬಳಿಕ ಬುಡಾಪೆಸ್ಟ್ ನಲ್ಲಿ ಸ್ಟ್ರಿಂಗ್ ಆರ್ಕೆಸ್ಟ್ರೇಶನ್ ಮಾಡಿರುವುದು ಪೀಟರ್ ಚಿತ್ರಕ್ಕೆ ಅನ್ನೋದು ಮತ್ತೊಂದು ವಿಶೇಷ. ಪೀಟರ್ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್, ದೀನಾ ಪೂಜಾರಿ, ಭರತ್ ತಾರಾಬಳಗದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಚಿತ್ರ ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!