ಉದಯವಾಹಿನಿ : ಭಾರತ ತಂಡದ ಮಾಜಿ ಆಲ್‌ರೌಂಡರ್‌, ಎರಡು ವಿಶ್ವಕಪ್‌ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಅವರು ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಮದ್ಯ ಲೋಕದ ಬ್ಯುಸಿನೆಸ್‌ಗೆ ಕಾಲಿಟ್ಟಿದ್ದಾರೆ. “ಫಿನೋ” ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್​ವೊಂದನ್ನು ಯುವಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ.
“ಫಿನೋ” ಅನ್ನು ಭಾರತದಲ್ಲಿ ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಆಯ್ದ ಸುಂಕ ರಹಿತ ಅಂಗಡಿಗಳಲ್ಲಿ ಮಾರಾಟ ಮಾಡಲಿದ್ದಾರೆ. ಈ ಮದ್ಯದ ಆರಂಭಿಕ ಬೆಲೆ ಸುಮಾರು 14,000 ರೂ. “ವೈಫಲ್ಯವು ಒಂದು ಆಯ್ಕೆಯಲ್ಲ” ಟ್ಯಾಗ್ ಲೈನ್ ಹೊಂದಿರುವ ಈ ಆಲ್ಕೋಹಾಲ್ ಉತ್ಪನ್ನವು ಈಗಾಗಲೇ ಮುಂಬೈನಲ್ಲಿ ಖರೀದಿಗೆ ಲಭ್ಯವಿದಿದೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ‘ಪಾಂಟಿಂಗ್ ವೈನ್ಸ್’ ಎಂಬ ವೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರ ಕಂಪನಿಯ ವೈನ್‌ಗಳು ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್​ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಲಭ್ಯವಿದೆ. ಇಂಗ್ಲೆಂಡ್‌ನ ಇಯಾನ್ ಬೋಥಮ್ ಕೂಡ ಪ್ರಮುಖ ವೈನ್ ಕಂಪನಿಯನ್ನು ನಡೆಸುತ್ತಿದ್ದಾರೆ. 2018 ರಲ್ಲಿ ಸ್ಥಾಪಿಸಲಾದ ಈ ವೈನ್ ಕಂಪೆನಿಯು ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಮಾರಾಟವನ್ನು ವಿಸ್ತರಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!