ಉದಯವಾಹಿನಿ, ಬೆಳಗಾವಿ: ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗಾಂಗ್ ಬಗ್ಗೆ ಎಸ್ಐಟಿ ಕೋರ್ಟ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಆರು ಜನ ಷಡ್ಯಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಧರ್ಮದ ಭಾವನೆ ಹಾಗೂ ಧಾರ್ಮಿಕ ಭಾವನೆ ಜೊತೆಗೆ ಚೆಲ್ಲಾಟ ಆಡಿದ್ದಾರೆ. ಇವರು ಪಾತ್ರದಾರಿಗಳು ಆದರೆ ಸೂತ್ರಧಾರಿಗಳು ಸಿಎಂ ಸೂತ್ತ ಇರುವರೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಈ ಸರ್ಕಾರ ಜನರ ಭಾವನೆ ಜೊತೆ ಚೆಲ್ಲಾಟ ಆಡಿದೆ. ಹಾದಿ ಬೀದಿಯಲ್ಲಿ ಹೋಗುವರ ಮಾತುಗಳನ್ನ ಕೇಳಿ ಎಸ್ಐಟಿ ರಚನೆ ಮಾಡಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ.
ಈ ಬುರುಡೆ ಗಾಂಗ್ ಶಾಮೀಲು ಎಂಬ ವರದಿ ಬಂದಿದೆ. ಸೂತ್ರಧಾರಿಗಳು ಬೆರೆಯೇ ಇದ್ದಾರೆ. ಸೂತ್ರಧಾರಿಗಳು ಕೂಡ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲೂ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.ಇನ್ನೂ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಆರು ಜನ ಭಾಗಿಯಾಗಿದ್ದಾರೆ ಅಂತ ಗೊತ್ತಾಗಿದೆ. ಆದರೆ ಕೇವಲ ಅವರಷ್ಟೇ ಅಲ್ಲ, ಕುಮ್ಮಕು ಕೊಟ್ಟವರ ಹೆಸರು ಉಲ್ಲೇಖ ಮಾಡಿಲ್ಲ. ಅವರ ಬಗ್ಗೆಯೂ ತನಿಖೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
