ಉದಯವಾಹಿನಿ , ಚಿತ್ರದುರ್ಗ: ಕುರಿ ತೊಳೆಯುತ್ತಿದ್ದ ಇಬ್ಬರು ಯುವಕರು ಚೆಕ್ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಿ.ಆರ್ ಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್ (23), ಮಾರುತಿ (19) ಮೃತ ಯುವಕರು. ಜಿ.ಆರ್ ಹಳ್ಳಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಂನಲ್ಲಿ ಮುಳುಗಿ ಯುವಕರು ಮೃತಪಟ್ಟಿದ್ದಾರೆ. ಇಬ್ಬರು ಯುವಕರಿಗೂ ಈಜು ಬಾರದ ಹಿನ್ನೆಲೆ ಚೆಕ್ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಬ್ಬರು ಯುವಕರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
