ಉದಯವಾಹಿನಿ , ಬೆಳಗಾವಿ: ಕಾಣದ ಕುರ್ಚಿಗೆ ಹಂಬಲಿಸಿದೇ ಮನ, ಕೂಡಬಲ್ಲೆನೆ ಒಂದು ದಿನ ಗೀತೆಯನ್ನು ಹಾಡುವ ಮೂಲಕ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್‌ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಕಾಲೆಳೆದಿದ್ದಾರೆ.ಸದನದಲ್ಲಿ ಉತ್ತರ ಕರ್ನಾಟಕ ಚರ್ಚೆಯ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಸರ್ಕಾರದ ಮೌನದ ಬಗ್ಗೆ ಬೆಲ್ಲದ್ ಪ್ರಸ್ತಾಪ ಮಾಡಿ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಕಾರಣಕ್ಕಾಗಿ ಮೇಕೆದಾಟು ಕೆಲಸ ಆರಂಭವಾಗಿಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಡಿಕೆ ಶಿವಕುಮಾರ್ ಮಧ್ಯಪ್ರವೇಶ ಮಾಡಿ, ನೀವು ಸಿಎಂ ಆಗಬೇಕು ಎಂದು ಕೊಂಡವರು, ವಿಪಕ್ಷದ ನಾಯಕರು ಆಗಬೇಕು ಎಂದ್ದಿದ್ದೀರಿ. ನಿಮಗೆ ಅನುಭವ ಇದೆ, ಮೊನ್ನೆ ತಾನೆ ನ್ಯಾಯಾಲಯದ ಆದೇಶ ಆಗಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಸಿ) ಆರು ತಿಂಗಳ ಸಮಯಾವಕಾಶ ನೀಡಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ನಾನು ನಮ್ರತೆಯಿಂದ ಕೈಮುಗಿದು ಕೇಳುತ್ತೇನೆ. ನೀವೆಲ್ಲಾ ಸಹಕಾರ ಕೊಟ್ಟರೆ ಆದಷ್ಟು ಬೇಗ ನಿಮ್ಮ ಜೊತೆ ಭೂಮಿ ಪೂಜೆ ಮಾಡುತ್ತೇನೆ ಎಂದು ಉತ್ತರಿಸಿದರು.
ಈ ವೇಳೆ ಸುನೀಲ್ ಕುಮಾರ್ ಮಧ್ಯ ಪ್ರವೇಶ ಮಾಡಿ, ಇಷ್ಟು ನಯ ವಿನಯ ಎಲ್ಲಿಂದ ಬಂತು ಸರ್ ನಿಮಗೆ..? ಇದೇ ಡಿಕೆ ಶಿವಕುಮಾರಾ? ಹೊಸ ಶಿವಕುಮಾರಾ..? ಡಿಕೆ ಶಿವಕುಮಾರ್ ಎಂಬುವುದಕ್ಕೆ ಒಂದು ಕಲ್ಪನೆ ಇದೆ. ಇಷ್ಟು ನಯ ವಿನಯ ಹೇಗೆ..? ದಿಢೀರ್ ಆಗಿ ಹೇಗೆ ಬಂತು ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!