ಉದಯವಾಹಿನಿ, ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕರೆದಿದ್ದ ಕಾಂಗ್ರೆಸ್ ಸಂಸದರ ಸಭೆಗೆ ಶಶಿ ತರೂರ್ ಮತ್ತೆ ಗೈರಾಗಿದ್ದಾರೆ. ತಿರುವನಂತಪುರಂ ಸಂಸದ ಶಶಿ ತರೂರ್ ಗೈರಾಗುತ್ತಿರುವ 3ನೇ ಸಂಸದರ ಸಭೆ ಇದಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆಗೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಮಾತುಗಳ ನಡುವೆ ಈ ಬೆಳವಣಿಗೆ ಕುತೂಹಲ ಹೆಚ್ಚಿಸಿದೆ.
ಡಿಸೆಂಬರ್ 19 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಗೊಳ್ಳುವ ಮೊದಲು, ಇದುವರೆಗಿನ ಕಾರ್ಯಕ್ಷಮತೆ ಪರಿಶೀಲಿಸಲು ಮತ್ತು ಬಿಜೆಪಿಯ ಮೇಲಿನ ದಾಳಿಯನ್ನ ಪರಿಷ್ಕರಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕಾಂಗ್ರೆಸ್‌ನ 99 ಸಂಸದರೊಂದಿಗೆ ರಾಹುಲ್ ಗಾಂಧಿ ಸಭೆ ಕರೆದಿದ್ದರು.
ತರೂರ್ ಗೈರು ಹಾಜರಾಗಲು ಕಾರಣವೇನು? ಅವರ X ಟೈಮ್‌ಲೈನ್‌ನಲ್ಲಿ ಖಾಸಗಿ ನಿಶ್ಚಿತಾರ್ಥಗಳು, ಕೋಲ್ಕತ್ತಾದಲ್ಲಿ ಅವರ ದೀರ್ಘಕಾಲದ ಸಹಾಯಕ ಜಾನ್ ಕೋಶಿ ಅವರ ಮದುವೆ ಮತ್ತು ಅವರ ಸಹೋದರಿ ಸ್ಮಿತಾ ತರೂರ್ ಅವರ ಜನ್ಮದಿನವನ್ನ ಉಲ್ಲೇಖಿಸಲಾಗಿದೆ. ಚಂಡೀಗಢ ಸಂಸದ ಮನೀಶ್ ತಿವಾರಿ ಕೂಡ ಸಭೆಗೆ ಗೈರುಹಾಜರಾಗಿದ್ದರು. ಮೊದಲನೆಯದು ನವೆಂಬರ್ 30 ರಂದು ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯತಂತ್ರದ ಸಭೆಯಾಗಿತ್ತು, ಎರಡನೇ ಸಭೆ ನವೆಂಬರ್ 18 ರಂದು ನಡೆದಿದ್ದು, ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ ಮೇಲೆ ಕೇಂದ್ರೀಕರಿಸಿತು. ಸಭೆಯ ನೇತೃತ್ವವನ್ನು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ವಹಿಸಿದ್ದರು.
