ಉದಯವಾಹಿನಿ, ಮಡಿಕೇರಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿ ಭೇಟಿಗಾಗಿ ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ ನರಕ ದರ್ಶನವಾಗಿದೆ. ಮಡಿಕೇರಿಗೆ ಬಂದಿದ್ದ ಯುವಕನನ್ನ ಖಾಸಗಿ ಹೋಂ ಸ್ಟೇನಲ್ಲಿ ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್‌ಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಭೇಟಿಯಾಗಿ ಮಹದೇವಬ್ ಮಡಿಕೇರಿಗೆ ಬಂದಿದ್ದಾನೆ.
ಒಂಟಿಯಾಗಿ ಬಂದಿದ್ದ ಮಹದೇವ್‌ನನ್ನ ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆಸಿಕೊಂಡಿದ್ದಾಳೆ. ಕೆಲ ಕಾಲ ಆತನೊಂದಿಗೆ ಮಾತನಾಡಿ ಡ್ರಿಂಕ್ಸ್ ಕೂಡ ಮಾಡಿ ಮಡಿಕೇರಿಯ ಪ್ರವಾಸಿತಾಣಗಳ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದೇ ವೇಳೆಯಲ್ಲಿ ಆಕೆಗೊಂದು ಫೋನ್ ಕರೆ ಬಂದಿದೆ. ತಕ್ಷಣ ನನ್ನ ಸಂಬಂಧಿಕರು ಯಾರೋ ಮೃತಪಟ್ಟಿದ್ದಾರೆ ತಾನು ಹೋಗಿ ಬರುತ್ತೇನೆ ಎಂದು ಅಲ್ಲಿಂದ ಹೊರಟಿದ್ದಾಳೆ. ರೂಮಿಗೆ ಬಂದ ಮೂವರು ಯುವಕರು ತನ್ನ ಬಳಿಯಿದ್ದ ಹಣ ವಸ್ತುಗಳೆಲ್ಲವನ್ನ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
