ಉದಯವಾಹಿನಿ, ಅಮ್ಮನ್: ಜೋರ್ಡಾನ್ ದೊರೆ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಜೋರ್ಡಾನ್ ನ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (ಅವರನ್ನು ವಿಶೇಷ ಸೂಚನೆಯ ಮೇರೆಗೆ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ II (ಅವರು ದೇಶದ ಅತೀ ದೊಡ್ಡ ವಸ್ತು ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ಕ್ರೌನ್ ಪ್ರಿನ್ಸ್ ಪ್ರವಾದಿ ಮೊಹಮ್ಮದ್ ಅವರ ವಂಶಸ್ಥರಾಗಿದ್ದು, 42ನೇ ತಲೆಮಾರಿನವರಾಗಿದ್ದರೆ. ಇಲ್ಲಿಂದ ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಮತ್ತು ಒಮಾನ್ ಗೆ ತೆರಳಲಿದ್ದಾರೆ.ಜೋರ್ಡಾನ್ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಅತೀ ದೊಡ್ಡ ವಸ್ತುಸಂಗ್ರಹಾಲಯಕ್ಕೆ ಸ್ವತಃ ಕರೆದುಕೊಂಡು ಹೋದರು. ರಾಜ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಅವರು ಸೋಮವಾರ ಜೋರ್ಡಾನ್ ರಾಜಧಾನಿ ಅಮ್ಮನ್ ಗೆ ಆಗಮಿಸಿದ್ದರು. ನಾಲ್ಕು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಜೋರ್ಡಾನ್ ಬಳಿಕ ಇಥಿಯೋಪಿಯಾ ಮತ್ತು ಒಮಾನ್ ಗೆ ತೆರಳಲಿದ್ದಾರೆ.
