ಉದಯವಾಹಿನಿ, ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯಹೂದಿ ಸಭೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 50 ವರ್ಷದ ಸಾಜಿದ್ ಅಕ್ರಮ್ ಭಾರತೀಯ ಪ್ರಜೆ ಎಂದು ಫಿಲಿಪೈನ್ಸ್ ವಲಸೆ ಬ್ಯೂರೋ ಮಂಗಳವಾರ ದೃಢಪಡಿಸಿದೆ. ಭಾನುವಾರ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮದಲ್ಲಿ ಸಾಜಿದ್ ಅಕ್ರಮ್ ಮತ್ತು ಆತನ ಮಗ 24 ವರ್ಷದ ನವೀದ್ ಅಕ್ರಮ್ ದಾಳಿ ನಡೆಸಿದ್ದು, ಒಟ್ಟು ಹದಿನೈದು ಜನರು ಸಾವನ್ನಪ್ಪಿ, 42 ಜನರು ಗಾಯಗೊಂಡಿದ್ದರು.

50 ವರ್ಷದ ಸಾಜಿದ್‌ ಅಕ್ರಮ್ ಹಣ್ಣಿನ ಅಂಗಡಿಯೊಂದರ ಮಾಲೀಕನಾಗಿದ್ದ. ಈತ ಪೊಲೀಸರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ. ಇನ್ನು ಈತನ ಮಗ ನವೀದ್‌ ಅಕ್ರಮ್. ಈತನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಭಾರತೀಯ ಪ್ರಜೆಯಾದ ತಂದೆ ಮಗ ಆಸ್ಟ್ರೇಲಿಯಾಗೆ ವಲಸೆ ಬಂದಿದ್ದರು.

ಹಂತಕರು ದಾಳಿ ನಡೆಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೆ ವಾರಾಂತ್ಯದ ಮೀನುಗಾರಿಕೆಗಾಗಿ ಜರ್ವಿಸ್ ಬೇಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದರು. ಆರೋಪಿಗಳ ಬಳಿ ಬಂದೂಕು ಪರವಾನಗಿ ಇತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ನ್ಯೂ ಸೌಥ್‌ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಯೋತ್ಪಾದಕರ ದಾಳಿಯನ್ನು ಉಲ್ಲೇಖಿಸಿ ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್, 1998 ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ದೇಶಕ್ಕೆ ಇವರು ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!