ಉದಯವಾಹಿನಿ, ಒಂದು ಐಟಂ ಹಾಡಿಲ್ಲದೇ ಸಿನಿಮಾನೇ ಅಪೂರ್ಣ ಅನ್ನುವ ಹಾಗೇ ಆಗಿದೆ. ಸಿನಿಮಾ ಹಾಡುಗಳಿಗಿಂತ ಐಟಂ ಹಾಡು ಒಂದು ಕೈ ಹೆಚ್ಚೇ ಜನಪ್ರಿಯವಾಗುತ್ತದೆ ಎನ್ನಬಹುದು. ಮೊದಲೆಲ್ಲಾ ಈ ಐಟಂ ಹಾಡಿಗೆ, ಈ ನೃತ್ಯಕ್ಕೆ ಹೆಜ್ಜೆ ಹಾಕುವ ಕೆಲವೊಂದಿಷ್ಟು ಡ್ಯಾನ್ಸರ್ಸ್ (dancers) ಬಳಗ ಇತ್ತು, ಆದರೆ ಈಗ ನಾಯಕಿಯರೇ ಈ ಹಾಡಲ್ಲಿ ಸೊಂಟ ಬಳಕಿಸೋದನ್ನು ನೋಡಬಹುದಾಗಿದೆ.
ಈ ಐಟಂ ಹಾಡಿಗೆ ಪರ-ವಿರೋಧಗಳು ಕೇಳಿ ಬರುತ್ತಲೇ ಇವೆ. ಸಿನಿಮಾಕ್ಕೂ (Film) ಹಾಡಿಗೂ ಎಳ್ಳಷ್ಟು ಸಂಬಂಧವಿರುವುದಿಲ್ಲ, ಕೇವಲ ಹೆಣ್ಣಿನ ಮಾದಕತೆಯನ್ನು ಬಳಸಿಕೊಳ್ಳುಲಾಗುತ್ತಿದೆ ಎಂಬುವುದು ಹಲವರ ವಾದ ಆದಾಗ್ಯೂ ದೊಡ್ಡ ದೊಡ್ಡ ನಿರ್ದೇಶಕರೇ ಈ ಪ್ರವೃತ್ತಿಯನ್ನು ಮುಂದುವರೆಸಿಕೊಳ್ಳುತ್ತಾ ಬರುತ್ತಿದ್ದಾರೆ. ಒಟ್ಟಾರೆ ಸಿನಿಮಾಗಳಿಂದ ‘ಐಟಂ ಹಾಡು’ಗಳನ್ನು ಇಲ್ಲವಾಗಿಸುವುದು ಅಸಾಧ್ಯ ಎಂಬಂತಾಗಿದೆ.
ಚಲನಚಿತ್ರ ಪ್ರಚಾರವಾಗಿ, ಸಿನಿಮಾದ ಆಕರ್ಷಣೆಯಾಗಿ ಈ ಐಟಂ ಸಾಂಗ್ ಅನ್ನು ಬಿಂಬಿಸ
ಲಾಗುತ್ತದೆ. ಇತ್ತೀಚೆಗೆ ರಾಜಮೌಳಿ, ಪ್ರಶಾಂತ್ ನೀಲ್, ಸಂಜಯ್ ಲೀಲಾ ಬನ್ಸಾಲಿ, ಸುಕುಮಾರ್ ಇಂತಹ ನಿರ್ದೇಶಕರ ಸಿನಿಮಾದಲ್ಲೂ ಈ ಐಟಂ ಹಾಡುಗಳಿರುವುದನ್ನು ನೋಡಬಹುದು.
ಇಂತಹ ಹಾಡಲ್ಲಿ ಕುಣಿಯುವ ನಾಯಕಿಯರಿಗೆ ಅಥವಾ ನೃತ್ಯಗಾರ್ತಿಗೆ ದೊಡ್ಡ ಸಂಭಾವನೆಯನ್ನೇ ನೀಡಲಾಗುತ್ತದೆ. ಅದರಲ್ಲೂ ಒಬ್ಬ ನಟಿ ಇಂತಹ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ 5 ಕೋಟಿ ರೂಗಳನ್ನು ತೆಗೆದುಕೊಂಡಿದ್ದಾರೆ.
