ಉದಯವಾಹಿನಿ, ಚಾಮರಾಜನಗರ: ಕುತೂಹಲಕ್ಕೆ ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿದ್ದ ರೈತ 3 ಗಂಟೆ ಕಾಲ ಲಾಕ್ ಆಗಿರುವ ಘಟನೆ ಚಾಮರಾಜನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕಿಟ್ಟಿ ಎಂಬ ರೈತ ಮೂರು ಗಂಟೆಗಳ ಕಾಲ ಬೋನಿನೊಳಗೆ ಲಾಕ್ ಆಗಿದ್ದರು. ಗ್ರಾಮದಲ್ಲಿನ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿತ್ತು. ಈ ಹಿನ್ನೆಲೆ ಚಿರತೆ ಸೆರೆಗೆ ರುದ್ರ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು. ಈ ವೇಳೆ ಕಿಟ್ಟಿ ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನ ಒಳಹೊಕ್ಕಿದ್ದರು. ಈ ವೇಳೆ ಆಟೋಮ್ಯಾಟಿಕ್ ಆಗಿ ಮುಚ್ಚಿಕೊಂಡ ಬೋನಿನ ಬಾಗಿಲು ಲಾಕ್ ಆಗಿದೆ.
ಬೋನಿನ ಬಾಗಿಲು ತೆರೆಯಲು ಯತ್ನಿಸಿದರೂ ಕೂಡ ಆಗದೇ ವಿಫಲರಾಗಿದ್ದಾರೆ. ಬಳಿಕ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದು, ಕಿಟ್ಟಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ರೈತರು ಬಂಧ ಮುಕ್ತಗೊಳಿಸಿದ್ದಾರೆ.
