ಉದಯವಾಹಿನಿ, ಸಾಮಾನ್ಯವಾಗಿ ಚಳಿಗಾಲದ ತಣ್ಣನೆಯ ಗಾಳಿ ಮತ್ತು ಅಧಿಕ ಆದ್ರ್ರತೆಯಿಂದಾಗಿ ತುಳಸಿ ಗಿಡಗಳು ಬಾಡುವುದು ಅಥವಾ ಎಲೆ ಉದುರುವ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಬೇರುಗಳು ಕೊಳೆತು ಗಿಡವೇ ಒಣಗಿಹೋಗಬಹುದು. ಇಂತಹ ಸಮಯದಲ್ಲಿ ನಿಮ್ಮ ಮನೆಯ ತುಳಸಿ ಗಿಡ ಮತ್ತೆ ಚಿಗುರಲು ಮತ್ತು ಆರೋಗ್ಯವಾಗಿರಲು ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ.
ಪೋಷಕಾಂಶಯುಕ್ತ ದ್ರವ ಗೊಬ್ಬರ ತಯಾರಿಸುವ ವಿಧಾನ:
ಕಾಫಿ ಪುಡಿ: 1 ಟೀ ಚಮಚ
ಎಪ್ಸಮ್ ಉಪ್ಪು: ಅರ್ಧ ಟೀ ಚಮಚ
ನೀರು: 1 ಕಪ್
ಬಳಸುವ ಕ್ರಮ: ಒಂದು ಕಪ್ ನೀರಿಗೆ ಕಾಫಿ ಪುಡಿ ಮತ್ತು ಎಪ್ಸಮ್ ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗಿಡದ ಬುಡದ ಸುತ್ತಲಿರುವ ಮಣ್ಣನ್ನು ಚಮಚ ಅಥವಾ ಸಣ್ಣ ಚಾಕುವಿನಿಂದ ಲಘುವಾಗಿ ಅಗೆಯಿರಿ (ಬೇರುಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಿ). ತಯಾರಿಸಿದ ಈ ದ್ರವವನ್ನು ಗಿಡದ ಬುಡಕ್ಕೆ ಸುರಿಯಿರಿ.
ಎಪ್ಸಮ್ ಉಪ್ಪಿನಲ್ಲಿರುವ ಮೆಗ್ನೆಸಿಯಮ್ ಅಂಶವು ಎಲೆಗಳು ಹಳದಿಯಾಗುವುದನ್ನು ತಡೆದು ಸದಾ ಹಸಿರಾಗಿರುವಂತೆ ಮಾಡುತ್ತದೆ. ಈ ಮಿಶ್ರಣವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ, ಗಿಡಕ್ಕೆ ಅಗತ್ಯವಿರುವ ತೇವಾಂಶವನ್ನು ನೀಡುತ್ತದೆ.
ಈ ಗೊಬ್ಬರವನ್ನು ನೀವು ಪ್ರತಿ ಎರಡು ತಿಂಗಳಿಗೊಮ್ಮೆ ಬಳಸಬಹುದು. ಇದರ ಬದಲಿಗೆ ದ್ರವ ರೂಪದ ವರ್ಮಿಕಾಂಪೋಸ್ಟ್ (ಎರೆಹುಳು ಗೊಬ್ಬರ) ಕೂಡ ಬಳಸಬಹುದು.
ಚಳಿಗಾಲದಲ್ಲಿ ತುಳಸಿಗೆ ಅತಿಯಾಗಿ ನೀರು ಹಾಕಬೇಡಿ ಮತ್ತು ಗಿಡಕ್ಕೆ ಸಾಕಷ್ಟು ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಿ.
