ಉದಯವಾಹಿನಿ, ಬೆಂಗಳೂರು, : ಆಧುನಿಕ ಜೀವನಶೈಲಿಯಿಂದಾಗಿ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಕೆಲಸದ ಒತ್ತಡ ಮತ್ತು ಆಹಾರ ಪದ್ದತಿಯಿಂದ ಸದಾ ಸುಸ್ತು ಮತ್ತು ಆಯಾಸ ಅನುಭವಿಸುವುದು ಸಾಮಾನ್ಯ. ಆದರೆ ಕೆಲವರು ಇದನ್ನು ನಿರ್ಲಕ್ಷಿಸುತ್ತಾರೆ. ಇದಕ್ಕೆ ರಕ್ತದಲ್ಲಿನ ಹಿಮೋಗ್ಲೋಬಿನ್ ಕೊರತೆಯೂ ಕಾರಣವಾಗಿರಬಹುದು. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದಾಗ ಅಥವಾ ವಿಟಮಿನ್ಸ್‌ಗಳಾದ ಬಿ12 ಮತ್ತು ಬಿ9ನಂತಹ ಪೋಷಕಾಂಶಗಳು ಕಡಿಮೆಯಾದಾಗ ಈ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇದನ್ನು ನಿವಾರಿಸಲು ಸರಿಯಾದ ಆಹಾರ ಕ್ರಮ ಪಾಲಿಸದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕಬ್ಬಿಣಾಂಶಯುಕ್ತ ಆಹಾರ
ಕಬ್ಬಿಣದ ಅಂಶ ಇರುವ ಆಹಾರಗಳನ್ನು ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟ ಸುಧಾರಣೆಯಾಗುತ್ತದೆ. ಕೆಲವು ಉತ್ತಮ ಮೂಲಗಳಾದ ದಾಳಿಂಬೆ, ಖರ್ಜೂರ, ಬೀಟ್‌ರೂಟ್, ದ್ವಿದಳ ಧಾನ್ಯಗಳು, ಕುಂಬಳಕಾಯಿ ಬೀಜ, ಎಳ್ಳು, ಮಸೂರ, ಮೀನು, ಕೋಳಿ, ಕೆಂಪು ಮಾಂಸ, ಡಾರ್ಕ್ ಚಾಕೊಲೇಟ್, ಮೊಟ್ಟೆಗಳು ಮತ್ತು ಹಸಿರು ಎಲೆಗಳನ್ನು ಸೇವಿಸಿ.

ವಿಟಮಿನ್ ಬಿ12 ಇರುವ ಆಹಾರ
ಹಾಲು, ಮೊಸರು ಮತ್ತು ಚೀಸ್ ವಿಟಮಿನ್ ಬಿ12ರ ಉತ್ತಮ ಮೂಲವಾಗಿದ್ದು, ಇದು ಹಿಮೋಗ್ಲೋಬಿನ್ ಉತ್ಪಾದನೆಗೆ ಅಗತ್ಯ. ಮಾಂಸಾಹಾರದಲ್ಲಿ ಮೊಟ್ಟೆ ಉತ್ತಮ ಮೂಲ.

ದ್ವಿದಳ ಧಾನ್ಯಗಳು: ಹಿಮೋಗ್ಲೋಬಿನ್ ಹೆಚ್ಚಿಸಲು ದ್ವಿದಳ ಧಾನ್ಯಗಳು ಹೆಚ್ಚು ಪ್ರಯೋಜನಕಾರಿ. ಮಸೂರ, ಕಡಲೆ ಮತ್ತು ಕಿಡ್ನಿ ಬೀನ್ಸ್ ಕಬ್ಬಿಣ ಮತ್ತು ಪ್ರೋಟೀನಿಂದ ಸಮೃದ್ಧವಾಗಿವೆ.

Leave a Reply

Your email address will not be published. Required fields are marked *

error: Content is protected !!