ಉದಯವಾಹಿನಿ, ರಿಯಾದ್ : ಸುಮಾರು 3 ದಶಕಗಳಲ್ಲಿ ಮೊದಲ ಬಾರಿ ಸೌದಿ ಅರೆಬಿಯಾದಲ್ಲಿ ಹಿಮಪಾತ ಸಂಭವಿಸಿದ್ದು ಮರುಭೂಮಿ ಮತ್ತು ಪರ್ವತಗಳನ್ನು ಹಿಮ ಆವರಿಸಿದ ಅಪರೂಪದ ದೃಶ್ಯ ಕಂಡು ಬಂದಿರುವುದಾಗಿ ವರದಿಯಾಗಿದೆ.
` ಜಾಗತಿಕ ತಾಪಮಾನ. ಸೌದಿ ಅರೆಬಿಯಾದಲ್ಲಿ ಹಿಮಪಾತವಾಗಿದೆ. ಅನೇಕ ಸ್ಥಳೀಯರಿಗೆ ಇದು ನಿಜವಾದ ಪವಾಡ. ಏಕೆಂದರೆ ಅವರು ತಮ್ಮ ಜೀವನದಲ್ಲಿ ಇದನ್ನು ಮೊದಲ ಬಾರಿಗೆ ನೋಡಿದ್ದಾರೆ’ ಎಂದು ಓರ್ವ ಬಳಕೆದಾರ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಬಲ್ ಅಲ್‌ಲಾಜ್ ಮತ್ತು ಟ್ರೊಜೆನಾದಂತಹ ಪ್ರದೇಶಗಳಲ್ಲಿ ತಾಪಮಾನವು ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು ಸುಮಾರು 30 ವರ್ಷಗಳಲ್ಲಿ ಮೊದಲ ಬಾರಿಗೆ ಹಿಮವು ನೆಲೆಗೊಳ್ಳಲು ಅನುವು ಮಾಡಿಕೊಟ್ಟಿದೆ. ಸೌದಿ ಅರೆಬಿಯಾ ಮತ್ತು ಖತರ್ ನಲ್ಲಿ ಡಿಸೆಂಬರ್ 18ರಂದು ಅರೆಬಿಯನ್ ಮರುಭೂಮಿಯ ಕೆಲವು ಭಾಗಗಳು ಹಿಮಪಾತಕ್ಕೆ ಸಾಕ್ಷಿಯಾಯಿತು .
