ಉದಯವಾಹಿನಿ, ಹುಬ್ಬಳ್ಳಿ: ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಓಡಾಟ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು. ಕಳೆದ ಐದು ದಿನಗಳ ಹಿಂದೆ ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಶ್ವಾನದಳದೊಂದಿಗೆ ಎರಡು ಪ್ರತ್ಯೇಕ ಬೋನು ಹಾಗೂ ಗಾಮನಗಟ್ಟಿ ಹೊರವಲಯ ಮತ್ತು ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನ ಅಳವಡಿಸಿದ್ದಾರೆ.
ವಿಮಾನ ನಿಲ್ದಾಣದ ಆವರಣ ಗೋಡೆಯಿಂದ ಶುಕ್ರವಾರ ಸಂಜೆ 6.40 ರ ವೇಳೆ ಹೊರಗೆ ಜಿಗಿದು ಹೋಗಿರುವ ಚಿರತೆ ನಸುಕಿನ ಜಾವ 2 ಗಂಟೆಗೆ ಮತ್ತೆ ಗಾಮನಗಟ್ಟಿ ಕಡೆಯಿಂದ ವಿಮಾನ ನಿಲ್ದಾಣದ ಒಳಗೆ ಜಿಗಿದಿದ್ದು, ಏರ್‌ಪೋರ್ಟ್‌ನ ಆವರಣದಲ್ಲಿರುವ ಗಿಡಗಂಟೆಗಳ ಮಧ್ಯದಲ್ಲಿ ಓಡಾಡಿದೆ. ಆ ನಂತರ ಹೊರಗೆ ಹೋಗಿರುವುದು ಕಂಡುಬಂದಿಲ್ಲ. ಚಿರತೆ ಸಂಚರಿಸುತ್ತಿರುವ ಮಾರ್ಗದಲ್ಲಿಯೇ ಎರಡು ಬೋನುಗಳನ್ನ ಇಟ್ಟಿದ್ದರೂ, ಸುಳಿವು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
