ಉದಯವಾಹಿನಿ, ಬೀಜಿಂಗ್: ಗಂಟೆಗೆ 700 ಕಿಮೀ ವೇಗದಲ್ಲಿ ಸಾಗಿ ಚೀನಾದ ರೈಲು ವಿಶ್ವ ದಾಖಲೆ ಬರೆದಿದೆ. ಚೀನಾ ತನ್ನ ಅತ್ಯಂತ ವೇಗದ ಮ್ಯಾಗ್ಲೆವ್ ರೈಲು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಾಸ್ ಆಗಿ ಅಚ್ಚರಿ ಮೂಡಿಸಿದೆ. ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಮ್ಯಾಗ್ನೆಟಿಕ್ ಲೆವಿಟೇಶನ್ ರೈಲಿನಲ್ಲಿ ಪರೀಕ್ಷೆಯನ್ನು ನಡೆಸಿದರು. ಈ ರೈಲು ಸುಮಾರು ಒಂದು ಟನ್ (ಸುಮಾರು 1,000 ಕೆಜಿ) ತೂಕ ಇದೆ. ಈ ಪರೀಕ್ಷೆಯನ್ನು 400-ಮೀಟರ್ (1,310-ಅಡಿ) ಮ್ಯಾಗ್ಲೆವ್ ಹಳಿಯಲ್ಲಿ ನಡೆಸಲಾಯಿತು. ಆ ವೇಗವನ್ನು ತಲುಪಿದ ನಂತರ ರೈಲನ್ನು ಸುರಕ್ಷಿತವಾಗಿ ನಿಲ್ಲಿಸಲಾಯಿತು. ಇದು ಇದುವರೆಗಿನ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಎಲೆಕ್ಟ್ರಿಕ್ ಮ್ಯಾಗ್ಲೆವ್ ರೈಲು ಎನಿಸಿಕೊಂಡಿತು. ರೈಲು ಮಿಂಚಿನಂತೆ ಹಾದುಹೋಗುವ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನೋಡುಗರು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ರೈಲು ಪಾಸ್ ಆಗುತ್ತೆ. ಎಂಥವರನ್ನೂ ಅಚ್ಚರಿಗೊಳಿಸುವ ವಿಶೇಷತೆಯನ್ನು ರೈಲು ಹೊಂದಿದೆ.
ರೈಲಿನಲ್ಲಿ ಸೂಪರ್ ಕಂಡಕ್ಟಿಂಗ್ ಆಯಸ್ಕಾಂತಗಳಿವೆ. ಅವು ಹಳಿಗಳನ್ನು ಮುಟ್ಟದೆಯೇ ರೈಲು ಸಾಗುವಂತೆ ನೋಡಿಕೊಳ್ಳುತ್ತವೆ.
