ಉದಯವಾಹಿನಿ, ಭುವನೇಶ್ವರ: ರಾಜ್ಯದ ಜಾರ್ಸುಗುಡ ಜಿಲ್ಲೆಯಲ್ಲಿ ನಡೆದ ಹೋಮ್ ಗಾರ್ಡ್ ಲಿಖಿತ ಪರೀಕ್ಷೆಯಲ್ಲಿ ಕೇವಲ 102 ಪೋಸ್ಟ್‌ಗಳಿಗೆ 4,000ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಈ ವೇಳೆ ಉದ್ಯೋಗಾಕಾಂಕ್ಷಿಗಳು ಬೃಹತ್ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.
ಒಡಿಶಾದ ವಿಶೇಷ ಸಶಸ್ತ್ರ ಪೊಲೀಸ್ ಬೆಟಾಲಿಯನ್ ಮೈದಾನದಲ್ಲಿ ನಡೆದ ಪರೀಕ್ಷೆ ವೇಳೆ 4,040 ಆಕಾಂಕ್ಷಿಗಳು ಭಾಗವಹಿಸಿದ್ದರು. ಕೇವಲ 102 ಪೋಸ್ಟ್‌ಗಳಿದ್ದು, ಪ್ರತಿ ಹುದ್ದೆಗೆ 40 ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಈ ಪೋಸ್ಟ್‌ಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಕೇವಲ 5ನೇ ತರಗತಿಯಾಗಿದ್ದರೂ ಕೂಡ ಪರೀಕ್ಷೆ ಬರೆಯಲು ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ತಾಂತ್ರಿಕ ಅರ್ಹತೆ ಪಡೆದಿದ್ದವರು ಆಗಮಿಸಿದ್ದರು.

ಈ ವೇಳೆ ಕೆಲವು ಅಭ್ಯರ್ಥಿಗಳು ಮಾತನಾಡಿ, ಖಾಸಗಿ ವಲಯದಲ್ಲಿ ಉದ್ಯೋಗಗಳ ಕೊರತೆ, ಸರ್ಕಾರಿ ನೇಮಕಾತಿ ವಿಳಂಬ ಮತ್ತು ಇತರ ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಅರ್ಜಿ ಸಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಆರ್ಥಿಕವಾಗಿ ಬದುಕುಳಿಯಲು ಇದು ತುಂಬಾ ಮುಖ್ಯ, ಜೀವನೋಪಾಯಕ್ಕಾಗಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಈ ಮೂಲಕ ವಿದ್ಯಾವಂತ ಯುವಕರ ಎದುರಿಸುತ್ತಿರುವ ಒತ್ತಡ ಎದ್ದು ಕಾಣಿಸುತ್ತಿದೆ. ಇದಕ್ಕೂ ಮುನ್ನ ಸಂಬಲ್ಪುರದಲ್ಲಿ ನಡೆದ ಪರೀಕ್ಷೆ ವೇಳೆ ಸುಮಾರು 8,000 ಅಭ್ಯರ್ಥಿಗಳು 187 ಹೋಮ್ ಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!