ಉದಯವಾಹಿನಿ , ಹೊಸ ವರ್ಷಕ್ಕೆ ಮನೆಯಲ್ಲಿ ಅನೇಕ ರೀತಿಯ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಒಂದೇ ರೀತಿಯ ಸಿಹಿ ತಿಂಡಿಗಳನ್ನು ಸವಿದು ಬೇಸರವಾಗಬಹುದು. ಹೊಸ ವರ್ಷಕ್ಕೆ ನೂತನ ರೀತಿಯ ಸಿಹಿ ಮಾಡುವ ವಿಧಾನದ ಕುರಿತು ತಿಳಿಯೋಣ. ಅದುವೇ ಬಾಯಲ್ಲಿಟ್ಟರೆ ಕರಗುವ ಬಾಂಬೆ ಹಲ್ವಾ. ಈ ರೀತಿಯಲ್ಲಿ ಸಿಹಿ ತಯಾರಿಸಿದರೆ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ.

ಈ ರೆಸಿಪಿಗೆ ಅಧಿಕ ಸಕ್ಕರೆ ಸೇರಿಸುವ ಅಗತ್ಯವಿಲ್ಲ. ಈ ಸಿಹಿಯನ್ನು ಮನೆಯಲ್ಲಿ ತುಂಬಾ ಸರಳವಾಗಿ ತಯಾರಿಸಬಹುದು. ಈ ಸಿಹಿ ಹೊರಗೆ ಮೃದುವಾಗಿ ಮತ್ತು ಒಳಗೆ ರಸಭರಿತವಾಗಿರುತ್ತವೆ. ಇವುಗಳನ್ನು ನೀವು ಮನೆಯಲ್ಲಿ ತಯಾರಿಸಿದರೆ ರುಚಿಯು ಸೂಪರ್ ಆಗಿರುತ್ತದೆ. ಸಖತ್ ರುಚಿಯಾದ ಬಾಂಬೆ ಹಲ್ವಾವನ್ನು ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಕಾರ್ನ್‌ಫ್ಲೋರ್ – ಅರ್ಧ ಕೆಜಿ (250 ಗ್ರಾಂ)
ನಿಂಬೆ ರಸ – 2 ಟೀಸ್ಪೂನ್ ಸಕ್ಕರೆ – 1 ಕೆಜಿ
ತುಪ್ಪ – 250 ಗ್ರಾಂ ಕೆಂಪು ಆಹಾರ ಬಣ್ಣ – ಅರ್ಧ ಟೀಸ್ಪೂನ್
ಗೋಡಂಬಿ – ಅರ್ಧ ಕಪ್ ಮನೆಯಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಸಖತ್ ಟೇಸ್ಟಿಯಾದ ಬಾಂಬೆ ಹಲ್ವಾ ಸಿದ್ಧಪಡಿಸಲು ಮೊದಲು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ 1/2 ಕೆಜಿ ಕಾರ್ನ್‌ಫ್ಲೋರ್ ಮತ್ತು 350 ಮಿಲಿ ನೀರನ್ನು ಹಾಕಿ ಹಾಗೂ ಉಂಡೆಗಳಿಲ್ಲದೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಜೊತೆಗೆ ಒಲೆ ಆನ್ ಮಾಡಿ ಹಾಗೂ ದೊಡ್ಡ, ದಪ್ಪವಾದ ಪಾತ್ರೆಗೆ 700 ಮಿಲಿ ನೀರನ್ನು ಹಾಕಿ ಅದಕ್ಕೆ 1 ಕೆಜಿ ಸಕ್ಕರೆ ಸೇರಿಸಿ ಕರಗಿಸಿ. ಸಕ್ಕರೆ ಕರಗಿದ ಬಳಿಕ ಸಕ್ಕರೆ ನೀರಿನ ಅರ್ಧದಷ್ಟು ತೆಗೆದು ಪಕ್ಕಕ್ಕೆ ಇಡಿ.

Leave a Reply

Your email address will not be published. Required fields are marked *

error: Content is protected !!