ಉದಯವಾಹಿನಿ : ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ-ತೆಲಂಗಾಣಗಳಲ್ಲಿ ಸಂಜೆಯ ಹೊತ್ತು ರ ಬದಿಯ ಬಿಸಿ ಬಿಸಿ ಬಜ್ಜಿ, ವಡೆ, ಬೋಂಡಾ ಸವಿಯುವುದು ಸಾಮಾನ್ಯ. ಆದರೆ, ಈ ರುಚಿಕರ ತಿನಿಸುಗಳನ್ನು ನೀಡ= ಬಳಸುವ ‘ಹಳೆಯ ದಿನಪತ್ರಿಕೆಗಳು’ ಅಕ್ಷರಶಃ ನಿಮ್ಮ ಆರೋಗ್ಯಕ್ಕೆ ಮರಣಶಾಸನ ಬರೆಯುತ್ತಿವೆ ಎಂಬುದು ನಿಮಗೆ ತಿಳಿದಿದೆಯೇ?
ಒಂದು ರಾಸಾಯನಿಕ ಬಾಂಬ್ ದಿನಪತ್ರಿಕೆಗಳ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ, ವರ್ಣದ್ರವ್ಯಗಳು ಮತ್ತು ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಬಿಸಿ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಪತ್ರಿಕೆಯ ಮೇಲೆ ಇರಿಸಿದಾಗ, ಶಾಯಿಯು ಕರಗಿ ನೇರವಾಗಿ ಆಹಾರದೊಂದಿಗೆ ಬೆರೆಯುತ್ತದೆ. ಇದು ನೋಡಲು ಸಾಮಾನ್ಯವೆನಿಸಿದರೂ, ಇದರ ಪರಿಣಾಮ ಭೀಕರವಾಗಿರುತ್ತದೆ.
ಅಂಗಾಂಗಗಳಿಗೆ ಹಾನಿ: ಶಾಯಿಯಲ್ಲಿನ ರಾಸಾಯನಿಕಗಳು ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಕುಂದಿಸುತ್ತವೆ.
ಕ್ಯಾನ್ಸ‌ರ್ ಭೀತಿ: ಪತ್ರಿಕೆಯ ಶಾಯಿಯಲ್ಲಿರುವ ಕೆಲವು ಅಂಶಗಳು ಕ್ಯಾನ್ಸರ್ ಕಾರಕ ಎಂದು ಸಾಬೀತಾಗಿದೆ.
ಜೀರ್ಣಕ್ರಿಯೆ ಮತ್ತು ನರಮಂಡಲ: ಇದು ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳು ಮತ್ತು ನರಮಂಡಲದ ಅಸ್ವಸ್ಥತೆಗೆ ಕಾರಣವಾಗಬಹುದು.
ರೋಗನಿರೋಧಕ ಶಕ್ತಿ: ಮಕ್ಕಳು ಮತ್ತು ವೃದ್ಧರಲ್ಲಿ ರೋಗನಿರೋಧಕ ಶಕ್ತಿಯನ್ನು ಇದು ಸಂಪೂರ್ಣವಾಗಿ ಕುಂಠಿತಗೊಳಿಸುತ್ತದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ 2018ರಲ್ಲೇ ಆಹಾರ ಪ್ಯಾಕೇಜಿಂಗ್‌ಗಾಗಿ ಪತ್ರಿಕೆಗಳನ್ನು ಬಳಸುವುದನ್ನು ನಿಷೇಧಿಸಿದೆ. ಆದರೂ ಅರಿವಿನ ಕೊರತೆಯಿಂದಾಗಿ ಹಲವೆಡೆ ಈ ಪದ್ಧತಿ ಇನ್ನೂ ಜೀವಂತವಾಗಿದೆ.

Leave a Reply

Your email address will not be published. Required fields are marked *

error: Content is protected !!