ಉದಯವಾಹಿನಿ ದೇವದುರ್ಗ : ಅರಕೇರಾ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್‍ನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದ ವಾರ್ಡ್‍ನ್ ಅಮಾನತು ಮಾಡಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕ ಸಮಿತಿ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು. ಸೌಲಭ್ಯ ಕಲ್ಪಿಸುವಂತೆ ಹಲವು ವಾರ್ಡ್‍ನ್ ಗಮನಕ್ಕೆ ತರಲಾಗಿದೆ. ಭರವಸೆಯಲ್ಲೇ ಕಾಲಹರಣ ಮಾಡುತ್ತಿದ್ದರಿಂದ ವಿದ್ಯಾರ್ಥಿಗಳು ಸಮಸ್ಯೆ ಮಧ್ಯೆಯೇ ವಾಸಿಸುವಂತಿದೆ. ಹಾಸಿಗೆ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳು ಕೊರತೆ ಎದುರಾಗಿದೆ ಎಂದು ದೂರಿದರು. ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ವಾರ್ಡ್‍ನ್‍ಗೆ ಕೇಳಿದರೇ, ದಮುಕಿ ಹಾಕುವ ಜತೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ವಾರ್ಡ್‍ನ್ ಭೀಮರಾಯ ಆಡಿದ್ದೇ ಆಟ ಎಂಬಂತ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿವರೆಗೆ ಯಾವುದೇ ಪ್ರಯೋಜನೆವಾಗಿಲ್ಲ. ವಾರ್ಡ್‍ನ್ ಹಾಸ್ಟಲ್‍ಗೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಈಹಿಂದೆ ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಎರಡ್ಮೂರು ಗಮನಕ್ಕೆ ತಂದಿದ್ದೇವೆ. ಸರಕಾರ ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಜತೆ ಅಗತ್ಯ ಸೌಕರ್ಯಗಳು ನೀಡಲಾಗುತ್ತಿದೆ. ವಾರ್ಡ್‍ನ್‍ಗಳ ಬೇಜವಬ್ದಾರಿ ವರ್ತನೆಯಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಿದೆ. ವಾರ್ಡ್‍ನ್ ಹಾಸ್ಟಲ್‍ಗೆ ಬರುವುದೇ ಅಪರೂಪ ಎಂಬಂತಾಗಿದೆ. ಅಡುಗೆ ಸಿಬ್ಬಂದಿಗಳೇ ಎಲ್ಲವೊ ನಿರ್ವಹಿಸುವಂತ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ವಾರ್ಡ್‍ನ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಒಂದೇ ವೇಳೆ ಅಲಕ್ಷ ಮನೋಭಾವನೆ ತಾಳಿದ ಪರಿಣಾಮ ಕಚೇರಿ ಮುಂದೆ ಹೋರಾಟ ತೀವ್ರಗೊಳಿಸಬೇಕಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮಲ್ಲಪ್ಪ ಗೌಡೂರು, ಬಾಳಪ್ಪ ಭಾವಿಮನಿ, ಭೀಮಶಪ್ಪ ಭಂಡಾರಿ, ಬಸವರಾಜ ಜಾಲಹಳ್ಳಿ, ಅಮಾತೆಪ್ಪ ಜೋಳದಹೆಡಗಿ, ದುರುಗಪ್ಪ ಸಮುದ್ರ, ಯಲ್ಲಪ್ಪ ಕರಿಗುಡ್ಡ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!