
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಚೊಕ್ಕಸಂದ್ರದ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಶ್ರೀ ಕೃಷ್ಣ ದೇವಸ್ಥಾನ ಈ ದೇವಾಲಯದಲ್ಲಿ ಶ್ರಾವಣ ಮಾಸ ಪ್ರಥಮ ಪವಿತ್ರ ಶುಕ್ರವಾರದಂದು ಬೆಳಗಿನ ಜಾವದ ದೇವರ ಅಲಂಕಾರ ಪೂಜೆ ಪುನಸ್ಕಾರ ಹೋಮ ಅಭಿಷೇಕ ಪೂಜೆ ಪುನಸ್ಕಾರ ನಡೆದವು ನಂತರ ಕುಂಭಾಭಿಷೇಕ ಮಹೋತ್ಸವ ಅರ್ಥ ಪೂರ್ಣವಾಗಿ ವಿಜ್ರಂಭಣೆಯಿಂದ ಕಾರ್ಯ ಕ್ರಮ ಜರುಗಿದವು ಶ್ರೀ ಕೃಷ್ಣ ದೇವಾಲಯದ ಕುಂಭಾಭಿಷೇಕ ಮಹೋತ್ಸವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಜಿ ಧನಂಜಯ್ ಭಾಗವಹಿಸಿ ದೇವರ ದರ್ಶನ ಪಡೆದು ನಂತರ ದೇವಸ್ಥಾನ ಪ್ರಮುಖರಾದ ಚೊಕ್ಕಸಂದ್ರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಯಾದವ್ ಸೇರಿದಂತೆ ದೇವಾಲಯ ಸದಸ್ಯರು ಧನಂಜಯ್ ಅವರಿಗೆ ಪುಷ್ಪ ಮಾಲೆ ಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಚೊಕ್ಕಸಂದ್ರ ಗ್ರಾಮಸ್ಥರ ಸೇರಿದಂತೆ ಮುಂತಾದವರು ಇದ್ದರು.
