
ಉದಯವಾಹಿನಿ , ಬೆಂಗಳೂರು: ರಾಜ್ಯದ ಎರಡನೇ ರಾಜಧಾನಿಯೆಂದೇ ಘೋಷಣೆಗೊಂಡಿರುವ ಹಾಗೂ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಐ.ಟಿ ಪಾರ್ಕ್ , ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.
ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ವಿಧಾನಸಭಾ ಸದಸ್ಯರಾದ ಅಭಯ್ ಪಾಟೀಲ್ ಅವರು ಬೆಳಗಾವಿಯಲ್ಲಿ ಐಟಿ ಪಾರ್ಕ್ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಗಳನ್ನು ನಿರ್ಮಿಸಿ ಅಭಿವೃದ್ಧಿಪರ ರಾಜ್ಯವನ್ನಾಗಿ ಮಾಡಬೇಕು ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕೆಂದು ಕೋರಿದ ಸಮಯದಲ್ಲಿ, ಉತ್ತರಿಸಿದ ಸಚಿವರು ಬೆಳಗಾವಿಯಲ್ಲಿ ಐ.ಟಿ ಪಾರ್ಕ್/ಸೆಮಿ ಕಂಡಕ್ಟರ್ ಪಾರ್ಕಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಐಟಿ ಪ್ಲಗ್ ಅಂಡ್ ಪ್ಲೇ ಮೂಲ ಸೌಕರ್ಯ ಸ್ಥಾಪನೆ, ಸ್ಟಾರ್ಟ್ ಅಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು. ವೇಗವರ್ಧಕ ಜಾಲಗಳು ಮತ್ತು ಸೀಡ್ ಫಂಡ್ ಬೆಂಬಲ, ಟೆಕ್ಸಿಲರೇಷನ್, ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯದ ತಂತ್ರಜ್ಞಾನ, ನಿಪುಣ ಕರ್ನಾಟಕ, ಐಡಿಯಾ2ಪಿಓಸಿ ಎಲಿವೇಟ್ (ಗ್ರಾಂಟ್ ಇನ್ ಏಡ್), ರಾಜೀವ್ ಗಾಂಧಿ ಉದ್ಯಮ ಶೀಲತೆ ಕಾರ್ಯಕ್ರಮ, ಎಲಿವೇಟ್ ಮಹಿಳಾ ಉದ್ಯಮಶೀಲತೆ, ಗ್ರಾಸ್ ರೂಟ್ ಇನೋವೇಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
