ಉದಯವಾಹಿನಿ, ಬೆಂಗಳೂರು: ಜನಾರ್ದನ ರೆಡ್ಡಿ ಇರಾನ್ ಅಥವಾ ಅಮೆರಿಕದಿಂದಾದ್ರೂ ಭದ್ರತೆ ತರಿಸಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ಜನಾರ್ದನ ರೆಡ್ಡಿ ಝೆಡ್+ ಭದ್ರತೆ ಕೇಳಿ ಅಮಿತ್ ಶಾ, ಸರ್ಕಾರಕ್ಕೆ ಪತ್ರ ಬರೆದಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಝೆಡ್ ಭದ್ರತೆ ಆದರೂ ಕೇಳಲಿ, ಇರಾನ್‌ನಿಂದ ಯಾವುದಾದರೂ ಭದ್ರತೆ ತೆಗೆದುಕೊಂಡು ಬರಲಿ, ಅಮೆರಿಕದಿಂದ ಆದರೂ ತರಿಸಿಕೊಳ್ಳಲಿ ಅಥವಾ ಇವರಾದರೂ ಭದ್ರತೆ ಮಾಡಿಕೊಳ್ಳಲಿ ಯಾರು ಬೇಡ ಅಂದರು. ಪತ್ರ ಬರೆದಿರೋದು ಬಹಳ ಸಂತೋಷ. ಅವರ ಪಾರ್ಟಿ ಕೇಡರ್ಸ್ ಅವರನ್ನೆ ನೂರು ಜನರನ್ನ ಭದ್ರತೆಗೆ ರೆಡಿ ಮಾಡಿಕೊಳ್ಳಲಿ ಎಂದು ಟೀಕಿಸಿದರು. ಬಳ್ಳಾರಿ ಗಲಾಟೆಯಲ್ಲಿ ಫೈಯರ್ ಆಗಿರೋ ಬುಲೆಟ್ ಸತೀಶ್ ರೆಡ್ಡಿ ಗನ್ ಮ್ಯಾನ್‌ದು ಎಂಬ ವರದಿ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಯಾರೇ ಆಗಿದ್ದರೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಎಲ್ಲಾ ಕಡೆ ವಿಗ್ರಹ ಇಡುತ್ತಾರೆ. ಅವರ ಭಕ್ತಿ ಭಾವನೆ ತೋರಿಸುತ್ತಾರೆ. ಅದಕ್ಕೆ ಅಸೂಯೆ ಯಾಕೆ ಪಡಬೇಕು. ವಾಲ್ಮೀಕಿ ಒಂದು ಸಮುದಾಯಕ್ಕೆ ಸೇರಿದವರಾ? ವಾಲ್ಮೀಕಿ ಅವರು ಎಲ್ಲರ ಆಸ್ತಿ. ರಾಮಾಯಣ ವಾಲ್ಮೀಕಿ ಅವರು ಬರೆದರು. ನಾವೆಲ್ಲರು ರಾಮಾಯಣ ಓದೋದಿಲ್ವಾ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
