ಉದಯವಾಹಿನಿ , ನೋಡಲು ಆಕರ್ಷಕ ಹಾಗೂ ತಿನ್ನಲು ಹುಳಿ-ಸಿಹಿಯಾದ ಸ್ಟ್ರಾಬೆರಿ ಕೇವಲ ರುಚಿಕರವಷ್ಟೇ ಅಲ್ಲ, ಅದರಲ್ಲಿ ನೂರಾರು ಪೋಷಕಾಂಶಗಳಿವೆ.
ಸ್ಟ್ರಾಬೆರಿಯಲ್ಲಿರುವ ‘ಆಂಥೋಸಯಾನಿನ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
ಸ್ಟ್ರಾಬೆರಿ ಹಣ್ಣು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ಸುಕ್ಕುಗಳನ್ನು ತಡೆದು, ಚರ್ಮವು ದೀರ್ಘಕಾಲ ಯೌವನಯುತವಾಗಿ ಕಾಣುವಂತೆ ಮಾಡುತ್ತದೆ.
ಇದರಲ್ಲಿ ಕ್ಯಾಲೊರಿಗಳು ಕಡಿಮೆ ಮತ್ತು ನಾರಿನಂಶ ಹೆಚ್ಚಿರುವುದರಿಂದ, ತೂಕ ಇಳಿಸಲು ಬಯಸುವವರಿಗೆ ಇದು ಅತ್ಯುತ್ತಮ ಹಣ್ಣು.
ಸ್ಟ್ರಾಬೆರಿ ಹಣ್ಣಿನ ಪ್ರೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀ‌ರ್ ಎಂದು ಏರಿಸುವುದಿಲ್ಲ.
ಇದರಲ್ಲಿರುವ ಪ್ಲೇವನಾಯ್ಡಗಳು ಮೆಮೊರಿ ಪವರ್ ಹೆಚ್ಚಿಸಲು ಮತ್ತು ವಯಸ್ಸಾದಂತೆ ಕಾಡುವ ಮರೆವಿನ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!