ಉದಯವಾಹಿನಿ , ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆಯುರ್ವೇದದಲ್ಲಿ ಲವಂಗಕ್ಕೆ ವಿಶೇಷ ಸ್ಥಾನವಿದೆ. ಅದರಲ್ಲೂ ರಾತ್ರಿ ಮಲಗುವ ಮುನ್ನ ಒಂದು ಲವಂಗವನ್ನು ಅಗಿಯುವುದು ಅಥವಾ ಲವಂಗದ ನೀರನ್ನು ಕುಡಿಯುವುದು ನಿಮ್ಮ ದೇಹದಲ್ಲಿ ಮ್ಯಾಜಿಕ್ ಮಾಡಬಲ್ಲದು. ಇದರಲ್ಲಿರುವ ಮ್ಯಾಂಗನೀಸ್, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ K ನಂತಹ ಪೋಷಕಾಂಶಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ.
ರಾತ್ರಿ ಲವಂಗ ಸೇವನೆಯಿಂದ ಆಗುವ ಪ್ರಮುಖ ಪ್ರಯೋಜನಗಳು:
ಜೀರ್ಣಕ್ರಿಯೆಗೆ ಪೂರಕ: ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲವಂಗ ಉತ್ತಮ ಮದ್ದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ.
ಗಾಢ ನಿದ್ರೆ ಮತ್ತು ಒತ್ತಡ ಮುಕ್ತಿ: ಆಧುನಿಕ ಜೀವನಶೈಲಿಯ ಒತ್ತಡದಿಂದ ನಿದ್ರೆ ಬರದಿದ್ದರೆ ಲವಂಗ ಸೇವಿಸಿ. ಇದು ಮನಸ್ಸನ್ನು ಶಾಂತಗೊಳಿಸಿ ಉತ್ತಮ ನಿದ್ರೆ ಬರಲು ಸಹಕರಿಸುತ್ತದೆ.
ಬಾಯಿಯ ಆರೋಗ್ಯ: ಹಲ್ಲುನೋವು ಅಥವಾ ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಲು ಲವಂಗಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಇದರಲ್ಲಿರುವ ಆಂಟಿ-ಬ್ಯಾಕ್ಟಿರಿಯಲ್ ಗುಣಗಳು ಬಾಯಿಯ ಸೋಂಕನ್ನು ತಡೆಯುತ್ತವೆ.ರೋಗನಿರೋಧಕ ಶಕ್ತಿ ಹೆಚ್ಚಳ: ಇದರಲ್ಲಿರುವ ಯುಜೆನಾಲ್ ಮತ್ತು ಪ್ಲೇವನಾಯ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಇದು ತಕ್ಷಣದ ಪರಿಹಾರ ನೀಡುತ್ತದೆ. ಹೃದಯದ ಆರೋಗ್ಯ ಮತ್ತು ರಕ್ತ ಪರಿಚಲನೆ: ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಲವಂಗದ ನೀರು ಸಹಾಯ ಮಾಡುತ್ತದೆ.
