
ಉದಯವಾಹಿನಿ ಬೆಂಗಳೂರು: ಕರ್ನಾಟಕದ ಪ್ರತಿಯೊಂದು ಜಿಲ್ಲೆಗೆ ಹೋದಾಗಲೂ ಒಂದೊಂದು ಆಹಾರ ವಿಶೇಷತೆಗಳಿಂದ ಹೆಸರು ವಾಸಿಯಾಗಿರುತ್ತವೆ. ಕೆಲವು ಆಹಾರ ಪದಾರ್ಥಗಳು ತಮ್ಮ ಸುವಾಸನೆಯನ್ನು ನಾಡಿನ ಆಚೆಗೆ ದಾಟಿಸಿ ದೇಶ, ವಿದೇಶಗಳಲ್ಲಿಯೂ ಸಹ ಅದರ ಕಂಪನ್ನು ಪಸರಿಸುತ್ತದೆ.ಅಂತಹ ಖಾದ್ಯಗಳ ಪೈಕಿ ಮೈಸೂರು ಪಾಕ್ ಹೆಸರುವಾಸಿಯಾಗಿದ್ದು, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುತ್ತದೆ.ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಮೈಸೂರ್ ಪಾಕ್ ಇದೀಗ ವಿಶ್ವ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿರುವುದು ಮತ್ತಷ್ಟು ವಿಶೇಷವೆನಿಸಿದೆ.
ಭಾರತದ ಮೂರು ಖಾದ್ಯಗಳು ಆನ್‌ಲೈನ್ ಟೂರ್ ಗೈಡ್ ಟೇಸ್ಟ್ ಅಟ್ಲಾಸ್ ಇತ್ತೀಚಿಗೆ ಬಿಡುಗಡೆ ಮಾಡಿದ 50 Best Street Food Sweets in the World ಪಟ್ಟಿಯಲ್ಲಿ ಭಾರತದ ಮೂರು ಖಾದ್ಯಗಳು ಸ್ಥಾನ ಪಡೆದಿದೆ. ಮೈಸೂರು ಪಾಕ್ 14ನೇ ಸ್ಥಾನದಲ್ಲಿದ್ದರೆ. ಕುಲ್ಫಿ 18ನೇ ಸ್ಥಾನ ಹಾಗೂ ಕುಲ್ಫಿ ಫಲೂದ 32ನೇ ಸ್ಥಾನದಲ್ಲಿರುವ ಭಾರತದ ಆಹಾರ ಖಾದ್ಯಗಳು.ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಈ ಸಿಹಿ ತಿನಿಸು ವಿಶ್ವದಾದ್ಯಂತ ಮನೆ ಮಾತಾಗಿದೆ. ಮೈಸೂರು ಅಂದ್ರೆ ಮೈಸೂರು ಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರು ಪಾಕ್, ಆನ್‌ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ.
