ಉಯವಾಹಿನಿ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂದರೆ ಇದೊಂದು ಸುಂದರ ಕನ್ನಡದ ಗಾದೆ ಮಾತಾಗಿದೆ. ಈಗ ಉಪ್ಪಿನಕಾಯಿ ಯಾಕೆ ಅಂತೀರಾ?. ಸದ್ಯ ಉಪ್ಪಿನಕಾಯಿ ಕುರಿತು ಇಲ್ಲೊಂದು ಮನಮೋಹಕವಾದ ಸುದ್ದಿ ಇದೆ. ಪ್ರಪಂಚದಲ್ಲಿ ಯಾವುದು ದುಬಾರಿ ಇಲ್ಲ ಹೇಳಿ, ಎಲ್ಲವೂ ಬೆಲೆ ಹೆಚ್ಚು ಮಾಡುಕೊಂಡಿವೆ. ಅದರಂತೆ ಇಡೀ ವಿಶ್ವದಲ್ಲಿಗ ಉಪ್ಪಿನಕಾಯಿ ಕೂಡ ಬಲು ದುಬಾರಿಯಾಗಿದೆ. ಊಟದ ಜೊತೆ ಯಾವುದಾದರೂ ಒಂದು ಉಪ್ಪಿನಕಾಯಿ ಇದ್ದರೇ ಅದರ ರುಚಿನೇ ಬೇರೆ ಇರುತ್ತದೆ. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಉಪ್ಪಿನಕಾಯಿ ಇದ್ದೇ ಇರುತ್ತದೆ. ಆದರೆ ಇಂತಹ ಉಪ್ಪಿನಕಾಯಿ ಭಾರೀ ಹಣ ಗಳಿಸುತ್ತೇ ಎಂದು ಎಂದಾದರೂ ನಿಮಗೆ ಅನಿಸಿದೆಯಾ?. ಹೌದು ಅಮೆರಿಕದ ಟಿವಿ ಕಾರ್ಯಕ್ರಮಕ್ಕಾಗಿ ಮೋಸ್ಟ್ ಎಕ್ಸ್‌ಪೆನ್ಸಿವ್ ಪ್ರೀಮಿಯಂ ಬ್ರ್ಯಾಂಡ್ ದಿ ರಿಯಲ್ ದಿಲ್ ಅಸಾಮಾನ್ಯ ಉಪ್ಪಿನಕಾಯಿ ರೆಡಿ ಮಾಡಿತು. ಇದನ್ನು ಅತ್ಯಂತ ಶ್ರೀಮಂತರು ತಿನ್ನುವುದರಿಂದ ಈ ಉಪ್ಪಿನಕಾಯಿಗೆ 24 ಕ್ಯಾರೆಟ್ ಎಂದು ನಾಮಕರಣ ಮಾಡಿದ್ದಾರೆ. ಉಪ್ಪಿನಕಾಯಿ ಎಂದಾಕ್ಷಣ ನಿಂಬೆಹಣ್ಣೋ ಅಥವಾ ಮಾವಿನಕಾಯಿಯಿಂದ ತಯಾರು ಮಾಡಿದ್ದಲ್ಲ. ಕ್ಯಾರೆಟ್‌ಗಳನ್ನು ಬಳಿಸಿ ಅವುಗಳನ್ನು ವಿಧವಿಧವಾಗಿ ರತ್ನಗಳ ಆಕಾರದಲ್ಲಿ ಕೈಯಿಂದ ಕೆತ್ತನೆ ಮಾಡಲಾಗುತ್ತದೆ. ಇದರ ಪ್ರತಿಯೊಂದು ಆಕಾರ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಉಪ್ಪಿನಕಾಯಿಯಲ್ಲಿ ಹೆಚ್ಚಾಗಿ ಕಲಾಕೃತಿಗಳನ್ನೇ ಕಾಣಬಹುದು.
ಜೊತೆಗೆ ಇದರಲ್ಲಿ ವಿಶ್ವದ ಅತ್ಯಂತ ದುಬಾರಿ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ. ಇಟಲಿಯ ಮೊಡೆನಾ ಪ್ರದೇಶದ ಬಿಳಿ ಬಾಲ್ಸಾಮಿಕ್ ವಿನೆಗರ್, ಷಾಂಪೇನ್ ವಿನೆಗರ್ ಮತ್ತು ಸ್ಪೇನ್‌ನ ವಿನೆಗರ್ ಡಿ ಜೆರೆಜ್‌ನಂತಹ ಅಪರೂಪದ ವಿನೆಗರ್ ಅನ್ನು ಇದರಲ್ಲಿ ಹಾಕಲಾಗುತ್ತದೆ. ಒರೆಗಾನ್ ಸಮುದ್ರದ ಉಪ್ಪು, ಇರಾನಿಯನ್ ಮಸಾಲೆಗಳು, ಕೇಸರಿ, ಫೆನ್ನೆಲ್ ಪರಾಗ (ಸುವಾಸನೆಯ ಮಸಾಲೆ), ಫ್ರೆಂಚ್ ಮೆಣಸಿನಕಾಯಿ ಹಾಗೂ ಮೆಕ್ಸಿಕನ್ ವೆನಿಲ್ಲಾ ಬೀನ್ಸ್ ಬಳಕೆ ಮಾಡಲಾಗುತ್ತದೆ. ಇದರಿಂದ ಈ ಉಪ್ಪಿನಕಾಯಿಯ ರುಚಿ ಮತ್ತೊಂದು ಲೆವೆಲ್‌ನಲ್ಲಿ ಇರುತ್ತದೆ. ಇದನ್ನು ಎಲ್ಲೆಂದರಲ್ಲಿ ರೆಡಿ ಮಾಡಿ ಮಾರ್ಕೆಟ್‌ನಲ್ಲಿ ಮಾರಾಟ ಮಾಡುವುದಿಲ್ಲ. ಕೇವಲ ಪ್ರದರ್ಶನಕ್ಕಾಗಿ ಆಗಾಗ ದೊಡ್ಡ ದೊಡ್ಡ ಶೋಗಳಲ್ಲಿ ಮಾತ್ರ 24 ಕ್ಯಾರೆಟ್ ಉಪ್ಪಿನಕಾಯಿ ತಯಾರು ಮಾಡುತ್ತಾರೆ. ಹಾಗೇ ಭಾರತದಲ್ಲಿ ಬಿಹಾರದ ಗಂಡಕ್ ನದಿಯಲ್ಲಿ ಸಿಗುವ ಮೀನುಗಳಿಂದ ತಯಾರಿಸಿ ಉಪ್ಪಿನಕಾಯಿ ಅತ್ಯಂತ ದುಬಾರಿ ಎಂದು ಹೇಳಲಾಗುತ್ತದೆ. ಈ ಮೀನುಗಳು ಕೂಡ ಸಿಗುವುದು ಅಪರೂಪವಾದ್ದರಿಂದ ಉಪ್ಪಿನಕಾಯಿ ಎಲ್ಲ ಕಡೆ ಸಿಗುವುದಿಲ್ಲ.
