ಉಯವಾಹಿನಿ, ಬಾಲ್ಯದಲ್ಲಿ ಮಕ್ಕಳು ಸ್ಥೂಲಕಾಯ ಅಥವಾ ಅತ್ಯಂತ ದಪ್ಪವಾಗುತ್ತಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ಜಾಹೀರಾತು ಪ್ರಕಟಿಸುತ್ತಿರವುದಕ್ಕೆ ಅಲ್ಲಿನ ಸರ್ಕಾರ ಸರ್ಕಾರ ಬ್ರೇಕ್ ಹಾಕಿದೆ. ಅಲ್ಲದೇ ಆನ್‌ಲೈನ್ ಮತ್ತು ಟಿವಿ ಜಾಹೀರಾತುಗಳಿಗೆ ಸಮಯದ ನಿಗಧಿ ಮಾಡಿ ಬಿಗ್ ಶಾಕ್ ನೀಡಿದೆ ಎಂದು ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್, ಪಾನೀಯ ಉತ್ಪನ್ನಗಳ ಆನ್‌ಲೈನ್ ಜಾಹೀರಾತು ಹಾಗೂ ಟಿವಿಯಲ್ಲಿ ರಾತ್ರಿ 9 ಗಂಟೆಯ ನಂತರ ಮಾತ್ರ ಪ್ರಕಟಿಸಬೇಕು. ದೊಡ್ಡವರಂತೆ ಮಕ್ಕಳಿಗೆ ಆಯ್ಕೆ ಮಾಡುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಜಂಕ್‌ಫುಡ್‌ಗಳ ಟಿವಿಯಲ್ಲಿ ಮಾತ್ರ ಜಾಹೀರಾತುಗಳ ಪ್ರಕಟಣೆಗೆ ಇಂಗ್ಲೆಂಡಿನ ಸರ್ಕಾರ ಸಮಯ ನಿಗದಿ ಮಾಡಿದೆ. ಅದರ ಒಳಗೆ ಮಾತ್ರ ಅವು ಪ್ರಕಟವಾಗಬೇಕು ಎನ್ನಲಾಗಿದೆ.
ಇಂಗ್ಲೆಂಡಿನ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಸ್ಥೂಲಕಾಯ ಹೆಚ್ಚುತ್ತಿದೆ. ಇದರಿಂದ ವಯಸ್ಕರು ಆಗುವುದಕ್ಕೂ ಮೊದಲೇ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಕ್ಕಳು ವಯಸ್ಸಿಗೆ ಬರುವ ಮೊದಲೇ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅಲ್ಲಿನ ಸರ್ಕಾರ ಮಹತ್ವದ ಚರ್ಚೆ ಮಾಡಿದ ನಂತರವೇ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳು ಕೊಬ್ಬು, ಸಕ್ಕರೆ ಹಾಗೂ ಉಪ್ಪಿನ ಅಂಶ ಹೆಚ್ಚಿಗೆ ಇರುವುದನ್ನು ತಿಂದರೆ ಸಾಮಾನ್ಯವಾಗಿ ಆರೋಗ್ಯಕ್ಕೆ ಪೆಟ್ಟು ಬೀಳುತ್ತದೆ ಎನ್ನುವುದು ಗಮನಿಸಲಾಗಿದೆ.
ಸದ್ಯ ಇಂಗ್ಲೆಂಡಿನ ಸರ್ಕಾರ 13 ವರ್ಗದ ಉತ್ಪನ್ನಗಳ ಮೇಲಿನ ಜಾಹೀರಾತುಗಳನ್ನು ನಿರ್ಬಂಧಿಸಿದೆ. ಇದು ಮುಂದಿನಗಳಲ್ಲಿ ಹೆಚ್ಚಾಗಬಹುದು. ಇದರಲ್ಲಿ ಸಕ್ಕರೆಯನ್ನು ಒಳಗೊಂಡು ಪದಾರ್ಥಗಳು, ಕ್ರಿಸ್ಪಿ, ಚಾಕೊಲೇಟ್ ಹಾಗೂ ಸಿಹಿ ತಿಂಡಿಗಳು ಸೇರಿವೆ. ಇವುಗಳನ್ನು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇನ್ನು ಟಿವಿಯಲ್ಲಿ ಪ್ರಕಟಿಸಬೇಕು ಎಂದರೆ ರಾತ್ರಿ 9 ಗಂಟೆ ನಂತರ ಪ್ರಕಟ ಮಾಡಬೇಕು ಎಂದು ಹೇಳಲಾಗಿದೆ.
