ಉದಯವಾಹಿನಿ, ಕುಶಾಲನಗರ: ರಾಜ್ಯದ ಅಂತ್ಯಂತ ಚಿಕ್ಕ ಜಲಾಶಯಗಳಲ್ಲಿ ಒಂದಾದ ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡುವ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದೆ. ಡ್ಯಾಂನ ಗರಿಷ್ಠ ಮಟ್ಟ ೮೭೨.೬೦೦ ಆಗಿದ್ದು ಡ್ಯಾಂನ ನೀರಿನ ಮಟ್ಟವು ೮೭೨.೬೦೦ ಆಗಿದೆ. ೦.೧೮ ಟಿ.ಎಂ.ಸಿ. ನೀರು ಸಂಗ್ರಹದ ಈ ಡ್ಯಾಂ ಸತತವಾಗಿ ಮರ‍್ನಾಲಕ್ಕು ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆಗೆ ಭರ್ತಿಯಾಗಿದ್ದು. ಅರ್ದಚಂದ್ರಕೃತಿಯುಳ್ಳ ಈ ಜಾಗದಲ್ಲಿ ನೀರು ಹಾಲ್ನೂರೆಯಂತೆ ದುಮ್ಮಿಕ್ಕಿ ಹರಿಯುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ
ಜಿಲ್ಲೆಯಾದ್ಯಂತ ಮುಂದುವರಿದ ಮಳೆಯಿಂದಾಗಿ ನದಿ ತೊರೆಗಳು ತುಂಬಿ ಹರಿಯುತ್ತಿದ್ದು.ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯವಾಗಿ ನೀರಿನ ಮಟ್ಟದಲ್ಲಿ ಎರಿಕೆ ಯಾಗಿದೆ. ಬಾಗಮಂಡಲದ ಕನ್ನಿಕೆ ಸುಜ್ಯೋತಿ ಮತ್ತು ಕಾವೇರಿ ನದಿಯ ತ್ರೀವೇಣಿ ಸಂಗಮ ಜಲಾವೃತ್ತ ಭರ್ತಿಯಾದ ಹಿನ್ನೆಲೆ ಬಾಗಮಂಡಲ ನಾಪೋಕ್ಲು ರಸ್ತೆ ಹೊದವಾಡ ರಸ್ತೆಯು ಜಲಾವೃತ್ತಗೊಂಡಿದೆ. ಹಾರಂಗಿ ಅಣಿಕಟ್ಟೆಯಿಮದ ನದಿಗೆ ೨೦,೦೦೦ ಕ್ಯೂಸೆಕ್ಸ್ ನೀರು ನದಿಗೆ ಹರಿಯಬಿಡುತ್ತಿರುವುದರಿಂದ ಹೆಚ್ಚಿದ ಹೊರಹರಿವಿನಿಂದ ಡ್ಯಾಂನ ಮುಂಬಾಗದ ಸೇತುವೆ ಮುಳುಗಡೆಯಾಗಿ ಹಾರಂಗಿ ಯಡವನಾಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಕುಶಾಲನಗರದ ತಗ್ಗು ಪ್ರದೇಶದ ಬಡಾವಣಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಜಿಲ್ಲೆಯ ಹಲವೆಡೆ ರಸ್ತೆಗೆ ಉರುಳಿದ ಮರಗಳಿಂದ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತ ಗೊಂಡು ವಿದ್ಯುತ್ ವ್ಯತ್ಯಯ ಗೊಂಡಿದೆ. ಕೊಡಗು ದಕ್ಷಿಣ ಕನ್ನಡ ಗಡಿಗ್ರಾಮ ಸಂಪಾಜೆಯಲ್ಲಿ ಮತ್ತು ಬಂಗ್ಲೆಗುಡ್ಡದ ಸಮೀಪದ ರಾಷ್ಟಿ
ಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಸಂಚಾರಕ್ಕೆ ಆಡಚಣಿ ಉಂಟಾಗಿದೆ. ಅರಣ್ಯ ಇಲಾಖೆ ಮತ್ತು ಸೆಸ್ಕ್ ಮತ್ತು ಸ್ಥಳೀಯಾಡಳಿತ ಪಂಚಾಯಿತಿಗಳ ವತಿಯಿಂದ ತುರ್ತು ಪರಿಹಾರ ಕಾರ್ಯಕೈಗೊಂಡಿದ್ದಾರೆ.
